ಸಾಂಬ್ರಾ ಶ್ರೀ ಮಹಾಲಕ್ಷ್ಮಿ ಜಾತ್ರೆಯ ನಿಮಿತ್ಯ ಸಂಚಾರ ಮಾರ್ಗ ಬದಲಾವಣೆ

Listen News

ಬೆಳಗಾವಿ: ತಾಲೂಕಿನ ನಗರ ಸಾಂಬ್ರಾ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಜಾತ್ರೆಯ ನಿಮಿತ್ಯ ಹೆಚ್ಚಿನ ಜನದಟ್ಟನೆ ಇರುವುದರಿಂದ ದಿನಾಂಕ: 19/05/2024 ರಿಂದ 21/05/2024 ರವರೆಗೆ ಸಾರ್ವಜನಿಕರು ಸುಗಮ ಸಂಚಾರದ ಅನುಕೂಲಕ್ಕಾಗಿ ಈ ಕೆಳಗಿನಂತೆ ಪರ್ಯಾಯ ಮಾರ್ಗಗಳನ್ನು ಅನುಸರಿಸಬೇಕಿದೆ.

Your Image Ad

1) ಸಾಂಬ್ರಾ ಏರ್‌ಪೋರ್ಟ ಹಾಗೂ ಬಾಗಲಕೋಟ ಕಡೆಗೆ ಹೋಗುವವರು - ಕಣಬರಗಿ- ಖನಗಾಂವ ಕ್ರಾಸ್-ಸುಳೇಬಾವಿ- ಮಾರಿಹಾಳ ಮುಖಾಂತರ ಸಾಂಬ್ರಾ ಏರ್‌ಪೂರ್ಟಗೆ ಹಾಗೂ ಬಾಗಲಕೋಟ ಕಡೆಗೆ ಸಾಗುವುದು. 2) ಸಾಂಬ್ರಾ ಏರ್‌ಪೋರ್ಟ ಹಾಗೂ ಬಾಗಲಕೋಟದಿಂದ ಬೆಳಗಾವಿ ನಗರ ಪ್ರವೇಶಿಸುವವರು: ಸಾಂಬ್ರಾ ಏರ್‌ಪೋರ್ಟ - ಮಾರಿಹಾಳ- ಸುಳೇಭಾವಿ- ಖನಗಾಂವ ಕ್ರಾಸ್ - ಕಣಬರಗಿ ಮಾರ್ಗವಾಗಿ ಬೆಳಗಾವಿ ನಗರವನ್ನು ಪ್ರವೇಶಿಸುವುದು. ಕಾರಣ ಈ ಮೇಲ್ಕಂಡ ದಿನಗಳಂದು ಸಾರ್ವಜನಿಕರು ಏರ್‌ಪೋರ್ಟ & ಬಾಗಲಕೋಟ ಸಂಚಾರ ಮಾರ್ಗಗಳನ್ನು ಬಳಸದೇ ಪರ್ಯಾಯ ಮಾರ್ಗವನ್ನು ಬಳಸಿ ಪೊಲೀಸ್‌ರಿಗೆ ಸಹಕರಿಸಬೇಕೆಂದು ಬೆಳಗಾವಿ ನಗರ ಪೊಲೀಸ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Your Image Ad

Read More Articles