
ಜನವರಿ 8 ರಿಂದ ಭಾರತ ಮತ್ತು ಯುಕೆ ನಡುವೆ ವಿಮಾನ ಹಾರಾಟ ಪುನರಾರಂಭ
- 14 Jan 2024 , 8:33 PM
- Delhi
- 77
ದೆಹಲಿ: ಜನವರಿ 8 ರಿಂದ ಭಾರತ ಮತ್ತು ಯುಕೆ ನಡುವೆ ವಿಮಾನ ಹಾರಾಟ ಪುನರಾರಂಬಿಸಲು ನಿರ್ಧರಿಸಲಾಗಿದೆ. ಬ್ರಿಟನ್ ರೂಪಾಂತರ ವೈರಸ್ ಹರಡುತ್ತಿರುವ ಹಿನ್ನಲೆ ಭಾರತ ಮತ್ತು ಯುಕೆ ನಡುವಿನ ವಿಮಾನ ಹಾರಾಟ ತಡೆಹಿಡಿಯಲಾಗಿತ್ತು.

ಈಗ ಮತ್ತೆ ಜನವರಿ 8 ರಿಂದ ಜನವರಿ 23 ರವರೆಗೆ ವಾರಕ್ಕೆ 15 ವಿಮಾನಗಳು ಮಾತ್ರ ಯುಕೆ ಮತ್ತು ಭಾರತ ನಡುವೆ ಹಾರಾಡುತ್ತವೆ ಎಂದು ತಿಳಿದು ಬಂದಿದೆ.

ಈ ವಿಮಾನಗಳು ದೆಹಲಿ, ಮುಂಬೈ, ಬೆಂಗಳೂರು ಹಾಗೂ ಹೈದ್ರಾಬಾದ್ ಗೆ ಮಾತ್ರ ಸೀಮಿತ್ ವಾಗಿರುತ್ತವೆ. ಹೆಚ್ಚಿನ ಮಾಹಿತಿಯನ್ನು ಡಿಜಿಸಿಎ ಇಂಡಿಯಾ ಶೀಘ್ರದಲ್ಲೇ ನೀಡುತ್ತದೆ ಎಂದು ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.