ಮುಂಬೈ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದ ಅರ್ಜುನ್ ತೆಂಡೂಲ್ಕರ್

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಮುಂಬೈ ಸೀನಿಯರ್ ಟೀಮಿನಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಇದೇ ಮೊದಲ ಬಾರಿಗೆ ಮುಂಬೈ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗಾಗಿ ಪ್ರಕಟಿಸಿರುವ 22 ಮಂದಿಯ ತಂಡದಲ್ಲಿ ಅರ್ಜುನ್ ಹೆಸರೂ ಇದೆ.ಜನೆವರಿ 10 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಮುಂಬೈಯನ್ನು ಪ್ರತಿನಿಧಿಸಲಿರುವ 22 ಆಟಗಾರರ ಪೈಕಿ ಅರ್ಜುನ್ ತೆಂಡೂಲ್ಕರ್ ಒಬ್ಬರಾಗಿದ್ದಾರೆ.

promotions

promotions

Read More Articles