ಸಾಲದ ಸುಳಿಯಲ್ಲಿ ಸಿಲುಕಿರುವ ಬಡ ರೈತರು

ಬೆಳಗಾವಿ: ಸಾಲದ ಸುಳಿಯಲ್ಲಿ ಸಿಲುಕಿರುವ ಬಡ ರೈತರಿಬ್ಬರು ಸಾಲದ ಬಂಧನದಿಂದ ಮುಕ್ತನನ್ನಾಗಿ ಮಾಡಿಸಲು ಜಿಲ್ಲಾಧಿಕಾರಿಗಳ ಬಳಿ ಮೊರೆ ಹೋಗಿದ್ದಾರೆ. ಹಿಂದುಜಾ ಫೈನಾನ್ಸ್ ನಲ್ಲಿ ನಾಲ್ಕು ಲಕ್ಷ ಲೋನ್ ಮಾಡಿ ಟ್ರ್ಯಾಕ್ಟರ್ ಖರೀದಿಸಿದ್ದೆವು ಮೊದಲ ಐದು ಕಂತುಗಳನ್ನು ಸರಿಯಾಗಿ ತುಂಬಿದೆವು ಆದರೆ ನಡುವೆ ಅನಾವೃಷ್ಟಿ ಹಾಗೂ ಸದ್ಯದ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಮೂರು ಕಂತುಗಳನ್ನು ತುಂಬಿಲ್ಲ ಆದರೆ ಈಗ ಉಳಿದ 3 ಕಂತುಗಳ ಹಣವನ್ನು ಈಗ ತುಂಬಲು ಸಿದ್ಧರಿದ್ದೇವೆ ಆದರೆ ಫೈನಾನ್ಸ್ ನವರು ತುಂಬಿಸಿಕೊಳ್ಳುತ್ತಿಲ್ಲ ಬಡ್ಡಿ, ಚಕ್ರ ಬಡ್ಡಿ ಹಾಕಿ ಹಣ ತುಂಬಿ ಎಂದು ನೋಟಿಸ್ ನೀಡಿ ಪಿಡಿಸುತ್ತಿದ್ದಾರೆ ಏನು ಮಾಡಬೇಕು ತಿಳಿಯುತ್ತಿಲ್ಲ. ತುತ್ತು ಹೊತ್ತಿನ ಊಟಕ್ಕೂ ಇಲ್ಲದಂತ ಪರಸ್ಥಿತಿಯಲ್ಲಿ ನಾವಿದ್ದು ಉಳುಮೆ ಮಾಡುವ ಎತ್ತುಗಳನ್ನು ಮಾರಿ ದುಡ್ಡು ತೆಗೆದುಕೊಂಡು ಬಂದಿದ್ದೇವೆ, ಈಗ ಬಡ್ಡಿ ಚಕ್ರಬಡ್ಡಿ ನೀಡಿ ಎಂದು ಹೇಳಿದರೆ ಎಲ್ಲಿಂದ ಕೊಡುವುದು ಎಂದು ಪ್ರಶ್ನೆ ಮಾಡುತ್ತಾರೆ ಭಾರತೀಯ ಕೃಷಿಕ ಸಮಾಜದ ನಿರ್ದೇಶಕ ಬಿರಪ್ಪಾ

promotions

Read More Articles