
ಬ್ಯಾಂಕಗೆ ಕನ್ನಹಾಕಿದ್ದ ಹೈಪಾಯ್ ಖದೀಮ ಅರೆಸ್ಟ್
- 14 Jan 2024 , 7:03 PM
- Belagavi
- 87
ಬೆಳಗಾವಿ: ಬೆಳಗಾವಿ ಮಹಾಂತೇಶ ನಗರದ ಕಿತ್ತೂರು ರಾಣಿ ಚನ್ನಮ್ಮ ಸಹಕಾರಿ ಬ್ಯಾಂಕ್ ಕಳ್ಳತನ ಮಾಡಿದ್ದ ಖತರ್ನಾಕ್ ಖದಿಮನನ್ನು ಬೆಳಗಾವಿ ಪೊಲೀಸರು ಇಂದು ಬಂಧಿಸಿದ್ದಾರೆ. ಬಂಧಿತ ಆರೋಪಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಮುಜಫರ್ ಶೇಖ್ ಎಂದು ತಿಳಿದು ಬಂದಿದೆ. ಈತ ಕಳ್ಳತನ ಮಾಡಲು 6 ಲಕ್ಷ 50 ಸಾವಿರ ಮೌಲ್ಯದ ಹಾರ್ಲೆ ಡೇವಿಡ್‌ಸನ್ ಬೈಕ್ ಬಳಸಿದ್ದಾನೆ. ಈ ಹೈಪಾಯಿ ಕಳ್ಳನಿಗೆ ನಗರದ ಮಾಳಮಾರುತಿ ಪೊಲೀಸರು ಬಲೆ ಬೀಸಿ ಎಸಿಪಿ ಸದಾಶಿವ ಕಟ್ಟಿಮನಿ, ಇನ್ಸ್ಪೆಕ್ಟರ್ ಸುನೀಲ್ ಪಾಟೀಲ್ ತಂಡದವರು ಅರೇಸ್ಟ್ ಮಾಡಿದ್ದಾರೆ. ಆರೋಪಿಯಿಂದ 15 ಲಕ್ಷ ಮೌಲ್ಯದ 301 ಗ್ರಾಂ ಚಿನ್ನಾಭರಣ, 101650 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 6 ಲಕ್ಷ 50 ಸಾವಿರ ಮೌಲ್ಯದ ಹಾರ್ಲೆ ಡೇವಿಡ್‌ಸನ್ ಬೈಕ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

