
ಕೋವಿಡ್-19 ಲಸಿಕೆ ಪಡೆದ ಮೊದಲ ಬಾಲಿವುಡ್ ಸೆಲೆಬ್ರಿಟಿ ಯಾರು ಗೊತ್ತಾ ?
- 14 Jan 2024 , 8:34 PM
- Mahashtra
- 104
ಮುಂಬೈ: ಕೋವಿಡ್-19 ಲಸಿಕೆಯನ್ನು ಹಾಕಲು ಇತ್ತ ಭಾರತ ಸಜ್ಜಾಗುತ್ತಿದೆ. ಆದರೆ ಮೊದಲೇ ಬಾಲಿವುಡ್ ಸೆಲೆಬ್ರಿಟಿ ಒಬ್ಬರು ಕೋವಿಡ್-19 ಲಸಿಕೆಯನ್ನು ಪಡೆದುಕೊಳ್ಳುವುದರ ಮೂಲಕ ಕೋವಿಡ್ ಲಸಿಕೆ ಪಡೆದ ಮೊದಲ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಟಿ ಶಿಲ್ಪಾ ಶಿರೋಡ್ಕರ್ ಕೊರೊನಾ ಲಸಿಕೆ ಪಡೆದಿದ್ದಾರೆ.


47 ವರ್ಷದ ನಟಿ ಶಿಲ್ಪಾ ಶಿರೋಡ್ಕರ್ ದುಬೈನಲ್ಲಿ ವಾಸವಾಗಿದ್ದಾರೆ. ಲಸಿಕೆ ಪಡೆದ ಬಗ್ಗೆ ನಟಿ ಶಿಲ್ಪಾ ಶಿರೋಡ್ಕರ್ ಎಡಗೈ ತೋಳಿಗೆ ಲಸಿಕೆ ಹಾಕಿಸಿಕೊಂಡಿರುವ ಫೋಟೋವನ್ನು ಶಿಲ್ಪಾ ಶೇರ್ ಮಾಡಿದರ ಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ 'ಲಸಿಕೆ ಮತ್ತು ಸರಕ್ಷಿತ. ಧನ್ಯವಾದಗಳು ಯುಎಇ' ಎಂದು ಬರೆದುಕೊಂಡಿದ್ದಾರೆ.
