ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಮಾರಾಟ,ಆರೋಪಿಗಳ ಬಂಧನ

ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಶೆರಿಗಲ್ಲಿಯಲ್ಲಿ ಸರಕಾರದಿಂದ ವಿತರಿಸುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಮೂರು ಜನರನ್ನು ಬಂಧಿಸಿದ್ದಾರೆ. ಸುಹಾಸ ಸುರೇಶ್ ಪಿಳವಕರ, ಮಹಾದೇವ ಲಕ್ಷ್ಮಣ ಪಾಟೀಲ್, ಅಹಮದ ಬಸೀರ ಅಹಮದ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

promotions

ಖಡೇಬಜಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ದೀರಜ್ ಬಿ ಶಿಂಧೆ ಹಾಗೂ ಅವರ ಸಿಬ್ಬಂದಿಯವರು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೇಡ್ ಮಾಡಿ ಒಂದು ಐಸರ್ ಕಂಪನಿಯ ಗುಡ್ಸ್ ವಾಹನ ಹಾಗು 2950 ಕೆಜಿ ತೂಕದ 118 ಅಕ್ಕಿ ಚೀಲಗಳನ್ನು ಅವುಗಳ ಬೆಲೆ 66375 ರೂಪಾಯಿ ಮೌಲ್ಯದ ಅಕ್ಕಿಯನ್ನು ಜಪ್ತ ಮಾಡಿದ್ದು ತನಿಖೆ ಮುಂದುವರಿಸಿದ್ದಾರೆ.

promotions

Read More Articles