
ದೇಶದ ಗಡಿ ರಕ್ಷಣೆಗಾಗಿ ಭಾರತೀಯ ಸೇನೆ ಸಿದ್ಧವಾಗಿದೆ : ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ
- 14 Jan 2024 , 8:16 PM
- Jammu&Kashmir
- 89
ದೇಶದ ಗಡಿ ರಕ್ಷಣೆ ಉಳಿವಿಗಾಗಿ ತಮ್ಮ ಪ್ರಾಣ ನೀಡಿ, ಹುತಾತ್ಮರಾಗಿರುವ ಎಲ್ಲ ಸೈನಿಕರಿಗೂ ಭಗವಂತ ಚಿರಶಾಂತಿ ನೀಡಲಿ. ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ಇಡೀ ಜಗತ್ತು ಇವತ್ತು ಕೊರೊನಾ ವೈರಸ್ನಿಂದ ತತ್ತರಿಸಿರುವ ಸಂದರ್ಭದಲ್ಲಿ ಚೀನಾ ಮತ್ತೊಮ್ಮೆ ತನ್ನ ನರಿ ಬುದ್ಧಿ ತೋರಿಸಿದೆ. ದಾಳಿಯಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದು, ನಮ್ಮ ಸೇನೆ ಕೂಡ ಚೀನಾದ 43 ಸೈನಿಕರನ್ನು ಹೊಡೆದುರುಳಿಸಿದೆ.
ಭಾರತದ ರಕ್ಷಣೆಗಾಗಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಭಾರತೀಯ ಸೈನ್ಯ ಸಿದ್ದವಾಗಿ ನಿಂತಿದೆ. 1962 ರ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ಹೋಲಿಸಿದ್ರೆ 130 ಕೋಟಿ ಜನರು ದೇಶ ಕಾಯುವ ಸೈನಿಕರ ಹಿಂದೆ ಇದ್ದಾರೆ. ಸೈನಿಕರ ಕುಟುಂಬಸ್ಥರು ಯಾರೂ ಆತಂಕಕ್ಕೆ ಒಳಗಾಗಬಾರದು. ಲಡಾಖ್ಗೆ ರೈಲು ಸಂಚಾರ ಸ್ಥಗಿತ ವಿಚಾರ ಈಗ ವಿಡಿಯೋ ಕಾನ್ಫರೆನ್ಸ್ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸುರೇಶ ಅಂಗಡಿ ಬೆಳಗಾವಿಯಲ್ಲಿ ಮಾಧ್ಯಮಗಳಿಕೆ ಹೇಳಿಕೆ ನೀಡಿದ್ದಾರೆ
