ಕೊರೋನಾ ಅಟ್ಟಹಾಸಕ್ಕೆ ಇಂದು ಮೂವರ ಬಲಿ

ಬೆಳಗಾವಿ  :ಕರೋನಾ ಎರಡನೇ ಅಲೆಯ ರಣಕೇಕೆಗೆ ಮಂಗಳವಾರ 615 ಪ್ರಕರಣಗಳು ದಾಖಲಾಗಿದ್ದು ಮೂವರು ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಿಗೆ ಸರಿಯಾಗಿ ಆಕ್ಸಿಜನ್ ಸಿಗುತ್ತಿಲ್ಲ ಎನ್ನುವ ಆರೋಪ ಕೊರೋನಾ ಸೋಂಕಿನ ಸಂಬಂಧಿಕರಿಂದ  ಕೇಳಿಬರುತ್ತಿದೆ.

promotions

ರಾಜ್ಯ ಸರಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದರೂ ಜನರು ಬೇಕಾಬಿಟ್ಟಿಯಾಗಿ ಸಂಚಾರ ನಡೆಸುತ್ತಿರುವುದು ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಮಂಗಳವಾರ ಒಂದೇ ದಿನ 615 ಕೊರೋನಾ ಸೋಂಕಿತರು ಪತ್ತೇಯಾಗಿದ್ದು ಮೂವರು ಮೃತಪಟ್ಟಿದ್ದಾರೆ.

promotions

ಅಥಣಿಯಲ್ಲಿ 25, ಬೆಳಗಾವಿ ತಾಲೂಕಿನಲ್ಲಿ 260, ಬೈಲಹೊಂಗನಲ್ಲಿ 51, ಚಿಕ್ಕೋಡಿಯಲ್ಲಿ 41, ಗೋಕಾಕನಲ್ಲಿ 65, ಹುಕ್ಕೇರಿಯಲ್ಲಿ 28, ಖಾನಾಪುರನಲ್ಲಿ 34, ರಾಮದುರ್ಗದಲ್ಲಿ 19, ರಾಯಬಾಗದಲ್ಲಿ 26, ಸವದತ್ತಿಯಲ್ಲಿ 55 ಹಾಗೂ ಇತರೆ ಕಡೆಯಲ್ಲಿ 11 ಪ್ರಕರಣ ದಾಖಲಾಗಿವೆ.

ಕೊರೋನಾ ಸೋಂಕಿನ ವಿರುದ್ದ ಹೋರಾಟ ನಡೆಸಿ ಮೂವರು ಮೃತಪಟ್ಟಿದ್ದಾರೆ. ಅದರಲ್ಲಿ ಗೋಕಾಕನ 55 ವರ್ಷದ ವ್ಯಕ್ತಿ, ಖಾನಾಪುರದ 86 ವರ್ಷದ ವೃದ್ದ, ಬೆಳಗಾವಿಯ 45 ವರ್ಷದ ವ್ಯಕ್ತಿ ಬಲಿಯಾದವರು ಎಂದು ತಿಳಿದು ಬಂದಿದೆ.

Read More Articles