
ಗೋಕಾನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಆಗಬೇಕು: ಶಾಸಕ ರಮೇಶ
- 14 Jan 2024 , 10:13 PM
- Belagavi
- 77
ಗೋಕಾಕ :ಲಾಕ್‌ಡೌನ್ ಕಟ್ಟುನಿಟ್ಟಾಗಿ ಆಗಬೇಕು. ಗ್ರಾಮದಿಂದ ಜನರು ನಗರಕ್ಕೆ ಬರಬಾರದು, ನಗರದ ಜನ ಗ್ರಾಮಕ್ಕೆ ಹೋಗಬಾರದು ತಾಲೂಕಿನಲ್ಲಿ ಕೊರೋನಾ ಸೋಂಕಿನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್-19 ನಿಯಂತ್ರಣ ಮಾಡುವ ಕುರಿತು ಗೋಕಾಕನಲ್ಲಿ ಶನಿವಾರ ತಾಲೂಕಾಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಗೋಕಾಕನಲ್ಲಿ ಕೊರೋನಾ ವೈರಸ್ ತಡಗಟ್ಟುವಲ್ಲಿ ಎಲ್ಲ ಅಧಿಕಾರಿಗಳ ಕೈ ಜೋಡಿಸಬೇಕು. ವಿನಾಕಾರಣ ಜನರು ಹೊರಗಡೆ ಬರುವುದನ್ನು ನಿಲ್ಲಿಸಿ ಕೊರೋನಾ ಮುಕ್ತ ಗೋಕಾಕ ಮಾಡಲು ಸಂಕಲ್ಪ ತೊಡಬೇಕೆಂದರು.
