
ಕೊರೋನಾ ಕಾಲಾವಧಿಯಲ್ಲಿ ಆಸ್ಪತ್ರೆಯಲ್ಲಿನ ವಂಚನೆಯ ವಿರುದ್ಧ ಸಂಘಟಿತರಾಗಿ ಹೋರಾಡಿ ! - ಆರೋಗ್ಯ ಸಹಾಯ ಸಮಿತಿ
- 14 Jan 2024 , 9:54 PM
- Belagavi
- 83
ಬೆಳಗಾವಿ: ಕೊರೋನಾದಿಂದಾಗಿ ರೋಗಿಯು ಗಂಭೀರ ಸ್ಥಿತಿಯಲ್ಲಿದ್ದಾಗ ಆ ರೋಗಿಯನ್ನು ಉಳಿಸಬೇಕೆಂದು ನಾವು ಏನನ್ನೂ ಲೆಕ್ಕಿಸದೆ ರೋಗಿಯನ್ನು ಆಸ್ಪತ್ರೆಗೆ ಸೇರಿಸುತ್ತೇವೆ; ಆದರೆ ಸರಕಾರವು ನಿಗದಿಪಡಿಸಿದ ರೋಗಿಗಳ ಆರೈಕೆಯ ದರಗಳು, ಅಗತ್ಯ ಔಷಧಿಗಳು, ಪರ್ಯಾಯ ಔಷಧಿಗಳು, ನಮ್ಮ ಹಕ್ಕುಗಳು, ಈಗ ಅಸ್ತಿತ್ವದಲ್ಲಿರುವ ಕಾನೂನುಗಳು ಇವು ನಮಗೆ ತಿಳಿದಿಲ್ಲದ್ದರಿಂದ ನಾವು ದೊಡ್ಡ ಪ್ರಮಾಣದಲ್ಲಿ ಲೂಟಿಗೊಳಗಾಗುತ್ತಿದ್ದೇವೆ.

ಈ ತೊಂದರೆಯ ಸಮಯದಲ್ಲಿ, ಅನೇಕರು ನೊಂದು ಹೋರಾಟದ ವಿಚಾರವನ್ನು ಬಿಟ್ಟುಬಿಡುತ್ತಾರೆ. ಆದ್ದರಿಂದ ಲೂಟಿಕೋರರಿಗೆ ಲಾಭವಾಗುತ್ತದೆ. ಅಂತಹ ಸಮಯದಲ್ಲಿ ನಾವು ಲಭ್ಯವಿರುವ ಕಾನೂನುಗಳು ಮತ್ತು ಔಷಧೋಪಚಾರಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡರೆ ನಾವು ವಂಚನೆಯನ್ನು ತಪ್ಪಿಸಬಹುದು. ಇದಕ್ಕಾಗಿ ಕೊರೋನಾ ಕಾಲಾವಧಿಯಲ್ಲಿ ನಡೆದ ವಂಚನೆಗಳ ವಿರುದ್ಧ ನಾವು ಸಂಘಟಿತರಾಗಿ ಹೋರಾಡಬೇಕು.

ನಾವು ಜಿಲ್ಲಾಧಿಕಾರಿ, ಮಹಾನಗರಪಾಲಿಕೆಯ ಆಯುಕ್ತರು ಮತ್ತು ಪೊಲೀಸರಿಗೆ ದೂರು ನೀಡುವ ಮೂಲಕ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯತ್ನಿಸಬಹುದು ಎಂದು ಆರೋಗ್ಯ ಸಹಾಯ ಸಮಿತಿಯ ಮುಂಬಯಿಯ ಜಿಲ್ಲಾ ಸಮನ್ವಯಕರಾದ ಡಾ. ಉದಯ ಧುರಿಯವರು ಹೇಳಿದರು. ಅವರು ‘ಆರೋಗ್ಯ ಸಹಾಯ ಸಮಿತಿ’ಯಿಂದ ಆಯೋಜಿಸಲ್ಪಟ್ಟ ‘ಕೊರೋನಾ ಕಾಲಾವಧಿಯಲ್ಲಿ ವಂಚನೆಗೆ ಬಲಿ : ನಿಮ್ಮ ಹಕ್ಕುಗಳನ್ನು ಗುರುತಿಸಿ !’, ಈ ‘ಆನ್ಲೈನ್ ವಿಶೇಷ ಚರ್ಚಾಗೋಷ್ಠಿ’ಯಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಪುಣೆಯ ‘ಶ್ರೀಮತಿ ಕಾಶಿಬಾಯಿ ನವಲೆ ಮೆಡಿಕಲ್ ಕಾಲೇಜು ಮತ್ತು ಜನರಲ್ ಹಾಸ್ಪಿಟಲ್’ನ ಅರವಳಿಕೆ ತಜ್ಞ ಡಾ. ಜ್ಯೋತಿ ಕಾಳೆ ಇವರು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯ Hindujagruti.org ಈ ಜಾಲತಾಣದಿಂದ ಅದೇರೀತಿ ‘ಟ್ವಿಟರ್’ ಮತ್ತು ‘ಯೂಟ್ಯೂಬ್’ನಲ್ಲಿ ಪ್ರಸಾರ ಮಾಡಲಾಯಿತು.
ಈ ಕಾರ್ಯಕ್ರಮವನ್ನು 6632 ಜನರು ವೀಕ್ಷಿಸಿದ್ದಾರೆ. ಈ ಚಚಾಗೋಷ್ಠಿಯ ಆರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರ ಸಂದೇಶವನ್ನು ಓದಲಾಯಿತು. ‘ಸಮಾಜವ್ಯವಸ್ಥೆಯನ್ನು ಉತ್ತಮವಾಗಿಡುವುದು ಇದು ಆಡಳಿತದ ಕರ್ತವ್ಯವಾಗಿದೆ; ಆದರೆ ಆಡಳಿತ ಮತ್ತು ಸಮಾಜವ್ಯವಸ್ಥೆ ಭ್ರಷ್ಟವಾಗಿರುವ ಕಾರಣ ನಾವು ಅದರ ವಿರುದ್ಧ ಧ್ವನಿ ಎತ್ತಬೇಕಾಗಿದೆ’, ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ದೇಶಾದ್ಯಂತದ ವಿವಿಧ ರಾಜ್ಯಗಳ ಕೆಲವು ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ಅವರು ಹೇಗೆ ಲೂಟಿಗೆ ಒಳಗಾಗಿದ್ದರು ಎಂಬ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸಿದರು. ಅದೇರೀತಿ ಕೆಲವು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಈ ಕುರಿತು ಮಾತನಾಡಿದ ಡಾ. ಧುರಿ ಇವರು, ಖಾಸಗಿ ಆಸ್ಪತ್ರೆಗಳಲ್ಲಿ ಭಾರಿ ಪ್ರಮಾಣದಲ್ಲಿ ಲೂಟಿ ನಡೆಯುತ್ತಿದೆ. ಇಂತಹ ಲೂಟಿ ಮಾಡುವ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ‘ಠಾಣೆ ಹೆಲ್ತಕೇರ್’ ಹಾಗೂ ‘ಸಫಾಯರ’ ಈ ಎರಡು ಆಸ್ಪತ್ರೆಗಳ ವಿರುದ್ಧ ‘ಆರೋಗ್ಯ ಸಹಾಯ ಸಮಿತಿ’ಯು ಠಾಣೆ ಮಹಾನಗರಪಾಲಿಕೆ ಆಯುಕ್ತರಿಗೆ ದೂರು ನೀಡಿತ್ತು. ಈ ಎರಡು ಆಸ್ಪತ್ರೆಗಳಿಂದ 16 ಲಕ್ಷ ರೂಪಾಯಿಗಳ ದಂಡವನ್ನು ವಸೂಲಿ ಮಾಡಲಾಗಿದೆ; ಆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ದಾಖಲಿಸಿದರೆ ಮತ್ತು ಹಣವನ್ನು ರೋಗಿಗಳಿಗೆ ಹಿಂದಿರುಗಿಸಲು ಒತ್ತಾಯಿಸಿದರೆ, ಜನರಿಗೆ ನಿಜವಾದ ನ್ಯಾಯ ಸಿಗುತ್ತದೆ. ಅದಕ್ಕಾಗಿ ನಾವು ‘ಗ್ರಾಹಕ ವೇದಿಕೆ’ಗೆ ದೂರು ನೀಡಬೇಕು, ಎಂದರು ‘ರೆಮೆಡಿಸಿವಿರ್’ ಚುಚ್ಚುಮದ್ದಿನ ಕುರಿತು ಮಾತನಾಡಿದ ಡಾ. ಜ್ಯೋತಿ ಕಾಳೆಯವರು, ‘ರೆಮಿಡಿಸಿವಿರ್’ ಇಂಜೆಕ್ಶನ್ಗೆ ಜೀವರಕ್ಷಕ ಎಂಬ ಮಾನ್ಯತೆ ಇಲ್ಲ.
ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗದವರು ಆರಂಭಿಕ ಹಂತಗಳಲ್ಲಿ ಈ ಇಂಜೆಕ್ಶನ್ನಿಂದ ಲಾಭವಾಗುತ್ತದೆ; ಆದರೆ ಈ ಇಂಜೆಕ್ಶನ್ಗೆ ಫ್ಯಾಬಿ-ಫ್ಲೂ, ಫಾವಿಪಿರವಿರ್, ಸ್ಟೀರೈಡ್ಗಳು, ಪ್ರತಿಜೈವಿಕಗಳು (ಆಂಟಿ-ಬಯೋಟಿಕ್),ಆಮ್ಲಜನಕ ಇತ್ಯಾದಿಗಳಿಗೆ ಹಲವು ಪರ್ಯಾಯ ಮಾರ್ಗಗಳಿವೆ. ಈ ಎಲ್ಲಾ ಪರ್ಯಾಯ ಔಷಧಿಗಳಿಂದ ರೋಗಿಗಳನ್ನು ಗುಣಪಡಿಸಬಹುದು. ಇದನ್ನು ಆಡಳಿತ ಮತ್ತು ವೈದ್ಯಕೀಯ ಸಂಘಟನೆಯು ಸಾರ್ವಜನಿಕರಿಗೆ ತಿಳಿಸಬೇಕು. ಈ ಸಮಯದಲ್ಲಿ ಜನರು ತಮ್ಮ ಅನುಭವಗಳನ್ನು ‘ಆರೋಗ್ಯ ಸಹಾಯ ಸಮಿತಿ’ಗೆ ತಿಳಿಸಬೇಕು ಎಂದು ಮನವಿ ಮಾಡಲಾಯಿತು.