
ರೂಪಾಂತರಿತ ಕೊರೊನ ವಿರುದ್ದ ಮೇಲುಗೈ ಸಾಧಿಸಿದ ಫಿಜರ್ ಬಯೋಏನ ಟೆಕ್
- 14 Jan 2024 , 6:27 PM
- world
- 192
ಯುಕೆ: ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಯುಕೆ ನಲ್ಲಿ ನಡೆಸಿದ ಅದ್ಯಯನದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಳಸಲಾಗುವ ಎರಡು ಮುಖ್ಯ ಲಸಿಕೆಗಳು ಭರವಸೆಯ ಹಾದಿ ತೋರಿವೆ ಎಂದು ತಿಳಿಸಿದೆ.


ಫಿಜರ್ ಮತ್ತು ಅಸ್ಟ್ರಾಜೆನೆಕಾ ಎರಡೂ ಡೋಸೇಜ್ ರೂಪಾಂತರಿತ ಕೊರೊನದ ರೋಗಲಕ್ಷಣದ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿದೆ ಎಂದು ತಿಳಿಸಿದೆ.

ಏಪ್ರಿಲ್ 5 ಮತ್ತು ಮೇ 16 ರ ನಡುವೆ ನಡೆದ ಅಧ್ಯಯನದಲ್ಲಿ ಕಂಡು ಬಂದ ಫಲಿತಾಂಶ ಏನೆಂದರೆ ಫಿಜರ್ ರೂಪಾಂತರದಿಂದ(B.1.617.2) ರೋಗಲಕ್ಷಣದ ಕಾಯಿಲೆಯ ವಿರುದ್ಧ 88% ಪರಿಣಾಮಕಾರಿಯಾಗಿದೆ ಮತ್ತು ಇದು ಕೆಂಟ್ ರೂಪಾಂತರದ (B.1.17) ವಿರುದ್ಧ 93% ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
ಹಾಗು ಅಸ್ಟ್ರಾಜೆನೆಕಾ ರೂಪಾಂತರಿ ವಿರುದ್ದ 60%ರಷ್ಟು ಪರಿಣಾಮಕಾರಿ ಮತ್ತು ಕೆಂಟ್ ರೂಪಾಂತರದ ವಿರುದ್ಧ 66% ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.