
ಸಂಕಟದಲ್ಲಿ ಸಿಲಿಕಿಕೊಂಡ್ ಸೋಶಿಯಲ್ ಮೀಡಿಯಾ ದೈತ್ಯರು
- 30 Dec 2023 , 4:12 AM
- Delhi
- 106
ದೆಹಲಿ: ಸೋಶಿಯಲ್ ಮೀಡಿಯಾ ದೈತ್ಯರಾದ ಫೇಸ್ಬುಕ್,ಟ್ವಿಟ್ಟರ್, ವಾಟ್ಸಾಪ್,ಇನ್ಸ್ಟಾಗ್ರಾಮ್ ನಾಳೆಯಿಂದ್ ಭಾರತದಲ್ಲಿ ಬ್ಯಾನ್ ಆಗುವ ತುಂಬಾ ಸಾಧ್ಯತೆ ಇವೆ.

ಈ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳು ಭಾರತ್ ಸರಕಾರ ಸೂಚಿಸಿದ ಮಾರ್ಗಸೂಚಿಗಳನ್ನು ಅನುಸರಿಸುತಿಲ್ಲ ಮತ್ತು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಸ್ವೀಕರಿಸುವ ಗಡುವು ಮೇ 25 ಕ್ಕೆ ಕೊನೆಗೊಳ್ಳುತ್ತದೆ ಆದರೆ ಇದುವರೆಗೆ ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಯಾವುದೇ ಪ್ಲಾಟ್‌ಫಾರ್ಮ್‌ಗಳು ಹೊಸ ನಿಯಮಗಳನ್ನು ಪಾಲಿಸಿಲ್ಲ ಎಂದು ತಿಳಿದು ಬಂದಿದೆ.

ಹೊಸ ನಿಯಮಗಳ ಪ್ರಕಾರ, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಅಥವಾ ನ್ಯೂಸ್ ಪ್ಲಾಟ್‌ಫಾರ್ಮ್‌ಗಳು ಭಾರತ ಮೂಲದ ಅನುಸರಣೆ ಅಧಿಕಾರಿಗಳನ್ನು ನೇಮಿಸಬೇಕು, ಅವರ ಹೆಸರು ಮತ್ತು ಸಂಪರ್ಕ ಭಾರತೀಯ ವಿಳಾಸವನ್ನು ನೀಡಬೇಕು.
ಫೆಬ್ರವರಿ 2021 ರಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿ) ಹೊಸ ಐಟಿ ನಿಯಮಗಳನ್ನು ಅನುಸರಿಸಲು ಸಾಮಾಜಿಕ ವೇದಿಕೆಗಳಿಗೆ ಮೂರು ತಿಂಗಳ ಸಮಯವನ್ನು ನೀಡಿತ್ತು.