ನಗರಸಭೆ, ಅಗ್ನಿಶಾಮಕ‌ ದಳ ಸಿಬ್ಬಂದಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ

ಗೋಕಾಕ: ಇಲ್ಲಿನ ನಗರಸಭೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಇಂದು ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನು ವಿತರಿಸಿದರು.

promotions

ನಂತರ ಮಾತನಾಡಿದ ಅವರು, "ಕೋವಿಡ್ ನಿಯಂತ್ರಣದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಹೋಗಲಾಡಿಸಲು ಇವರ ಪಾತ್ರ ಮಹತ್ವದ್ದಾಗಿದೆ‌. ವಾರಿಯರ್ಸ್ ಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಾವು‌‌ ಚಿಕ್ಕ ಸಹಾಯ ಮಾಡುತ್ತಿದ್ದೇವೆ. ವಾರಿಯರ್ಸ್ ಗಳು ಇದರ ಸದುಪಯೋಗ ಪಡೆಯಬೇಕು" ಎಂದು ಹೇಳಿದರು.

promotions

ಇದೇ ಸಂದರ್ಭದಲ್ಲಿ ರಾಹುಲ್ ಅವರು ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಅವರೊಂದಿಗೆ ಕೊರೊನಾ ನಿಯಂತ್ರಣದ ಕುರಿತು ಚರ್ಚೆ ನಡೆಸಿದರು. "ನಗರಸಭೆಯ ಸಿಬ್ಬಂದಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲು ನಾವು ಸಿದ್ಧರಿದ್ದೇವೆ. ತಾವು ಧೈರ್ಯದಿಂದ ತಮ್ಮ ಕರ್ತವ್ಯ ನಿರ್ವಹಿಸಿ" ಎಂದು ರಾಹುಲ್ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪರಿಸರ ಅಭಯಂತರ ಎಂ.ಎಚ್. ಗಜಾಕೋಶ, ಪ್ರಕಾಶ ಅಮಾತೆನವರ್, ಅಗ್ನಿಶಾಮಕದ ದಳದ ವಿ.ಆರ್.‌ಬಾಗೋಜಿ, ವಿ.ಎಸ್. ಉಳ್ಳಾಗಡ್ಡಿ, ಎಂ.ಎ. ಮುನವಳ್ಳಿ, ಎಸ್.ಎಸ್. ಸಂಗಮ, ಮುಖಂಡರಾದ ವಿಠ್ಠಲ ಪರಸನ್ನವರ, ಮಾರುತಿ ಗುಟುಗುದ್ದಿ, ಪಾಂಡು ರಂಗಸುಬೆ, ಸುರೇಶ ನಾಯ್ಕ್ ಸೇರಿ ಇನ್ನಿತರರು ಇದ್ದರು.

Read More Articles