ಸಮಾಜ ಸೇವೆಗೆ ಮುಂದಾದ ಚಿಕ್ಕೋಡಿ KA23 ಫೇಸ್ ಬುಕ್ ಪೇಜ

ಚಿಕ್ಕೊಡಿ ತಮ್ಮ ಸ್ವಾರ್ಥ ಕ್ಕಾಗಿ ಸೇವೆಗೆ ಮುಂದಾಗುವ ಈ ಸಮಾಜದಲ್ಲಿ ಚಿಕ್ಕೋಡಿಯ ಕೆ.ಏ ೨೩ (ಆಫಿಶಿಯಲ್) ಫೇಸ್ ಬುಕ್ ಪೇಜ್ ನಿಸ್ವಾರ್ಥ ಮನೋಭಾವದಿಂದ‌ ಒಂದು ಕೈ ಯಿಂದ ಮಾಡಿದ ಸೇವೆ ಇನ್ನೋಂದು ಕೈಗೆ ಗೊತ್ತಾಗಬಾರದು ಎಂಬ ಮಾತಿನಂತೆ, ಕೊರೊನ ೨ನೇ ಅಲೆಗೆ ಭಾಗಶಹ ನಲುಗಿದ ಜನರ ಜೀವನ ಸಹಾಯಕ್ಕೆ ಮುಂದಾಗಿದ್ದು ಅಭಿಮಾನದ ಸಂಗತಿ.

promotions
logintomyvoice

ಸಾಮಾಜಿಕ ಕಾಳಜಿ, ಜಾಗೃತಿ ಯನ್ನು ಹೊತ್ತು ಚಿಕ್ಕೋಡಿ ಕೆಲ ಯುವಕರು ಸೇರಿ ಒಂದು ವರ್ಷದ ಹಿಂದೇ ಆರಂಭಿಸದ ಕೆ.ಏ ೨೩ (ಆಫಿಶಿಯಲ್) ಪೇಸ್ ಬುಕ್ ಪೇಜ್ ಈ ಸಂದಿಗ್ದ ಸ್ಥಿತಿಯನ್ನು ಕಂಡು ಸಮಾಜದ ಕಟ್ಟ ಕಡೆಯ ಮನೆಗೆ ಒಂದು ತಿಂಗಳು ಪೂರ್ತಿಯಾಗುವಷ್ಟು ರೇಷನ್ ಕೀಟದ ನೀಡಲು ಮುಂದಾಗಿದೆ.

promotions
logintomyvoice

ಈ ವರೇಗೂ ೨೭೦೦೦ ಹಿಂಬಾಲಕರನ್ನು ಹೊಂದಿದ್ದ ಈ ಫೇಸ್ ಬುಕ್ ಪೇಜ್ ರಾಯಭಾಗ, ನಿಪ್ಪಾಣಿ, ಹುಕ್ಕೇರಿ,ಅಥಣಿ ಸೇರಿ ಚಿಕ್ಕೋಡಿ ಲೋಕಸಭಾದ್ಯಂತ ಗೋದಿ ಹಿಟ್ಟು,ಅಕ್ಕಿ, ಸಕ್ಕರೇ,ಚಾ ಪುಡಿ, ಸಕ್ಕರೇ, ರವೆ ಬೇಳೆಗಳು ಸೇರಿದಂತ ದಿನ ಬಳಕೆಯ ವಸ್ತುಗಳನ್ನೋಳಗೊಂಡಂತೆ ಒಟ್ಟು ೧೮ ಸಾಮಗ್ರಿಯುಳ್ಳ ಕಿಟ್ ರೂಪದಲ್ಲಿ ಒಟ್ಟು ಸುಮಾರು ನೂರಕ್ಕು ಹೆಚ್ಚು ಕುಟುಂಬಗಳಿಗೆ ನೀಡುವ ಯೋಜನೆ ಹೊಂದಿದೆ.

ಇನ್ನು ಲಾಕ್ ಡೌನ್ ಸಂಧರ್ಬದಲ್ಲಿ ಚಿಕ್ಕೋಡಿ, ಉಗಾರ,‌ಕಾಗವಾಡ, ನಿಪ್ಪಾಣಿ, ಸದಲಗಾ ಸೇರಿದಂತೆ‌ ಅನೇಕ ಗ್ರಾಮಗಳಲ್ಲಿ ಒಟ್ಟು ೨೦೦೦ಕ್ಕೂ ಅಧಿಕ ಎನ್95 ಮಾಸ್ಕ್ ಗಳನ್ನು ವಿತರಿಸಿದ್ದಾರೆ.ಸ್ಥಳಿಯವಾಗಿ ಕೆಲ ದಾನಿಗಳು ಸ್ವತಃ ಮುಂದೆ ಬಂದು ಕೈ ಜೋಡಿಸಿದ್ದಾರೆ.

ಫೇಸ್ ಬುಕ್ ಸೇರಿ ಸಾಮಾಜಿಕ‌ ಜಾಲತಾನಗಳಲ್ಲಿ ೨೩(ಆಫೀಶಿಯಲ್) ನದ್ದೇ ಹಲಾ ಜೋರಾಗಿದ್ದು, ದಾನಿಗಳು ೮೪೯೭೮೬೩೪೯೨ ನಂಬರ್ ಗೆ ಆರ್ಥಿಕ ಹಾಗು ಸಾಮಗ್ರಿಗಳನ್ನು ನೀಡುವ ಮೂಲಕ ಕೈ ಜೋಡಿಸ ಬಹುದಾಗಿದೆ ಎಂದು ಸದಸ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

logintomyvoice

ಇದು ಪ್ರಚಾರವಲ್ಲ, ಸಾಮಾಜಿಕ ಜವಾಬ್ದಾರಿ ಎಂಬ ಘೋಷವಾಕ್ಯದಡಿ ನಾವು ಸಾಗುತ್ತಿದ್ದು, ಸಮಾಜದಲ್ಲಿ ನಿಜವಾದ ಫಲಾನುಭವಿಯನ್ನು ಹುಡುಕಿ ಕಿಟ್ ವಿತರಿಸುವದೇ ನಮ್ಮ ಮುಖ್ಯ ಗುರಿಯಾಗಿದೆ.

- ಪ್ರಮೋದ್ ಆಲಪ್ಪನವರ (KA23 ಪೇಜ್.ಚಿಕ್ಕೋಡಿ

Read More Articles