ವಿಶ್ವಕರ್ಮ ಸಮಾಜದ ಸಮಗ್ರ ಅಭಿವೃದ್ಧಿಗೆ ಜೂಮ್ ಆಪನಲ್ಲಿ ಮೀಟಿಂಗ್ ಮಾಡಿದ ವಿಶ್ವಕರ್ಮ ಮುಖಂಡರು

ಬೆಳಗಾವಿ: ವಿಶ್ವಕರ್ಮ ಸಮಾಜದ ಸಮಗ್ರ ಅಭಿವೃದ್ಧಿಗೆ ಜೂಮ್ ಆಪನಲ್ಲಿ ಮೀಟಿಂಗ್ ಮಾಡಿದ ವಿಶ್ವಕರ್ಮ ಮುಖಂಡರು.ಓಂ ಶ್ರೀ ಗಾಯತ್ರಿ ವಿರಾಟ್ ವಿಶ್ವಕರ್ಮ ಪರಬ್ರಹ್ಮನೇ ನಮಃ ಬೆಳಗಾವಿ ಜಿಲ್ಲೆಯ ವಿಶ್ವಕರ್ಮ ಸೇವಾ ಸಮಿತಿಯ ವಿಡಿಯೋ ಕಾನ್ಫರೆನ್ಸ್ ಕಾಲ್ ಜೂಮ ಮೀಟಿಂಗ್ ಆಯೋಜಿಸ ಲಾಗಿದ್ದು ಸಭೆಯ ಅಧ್ಯಕ್ಷತೆಯನ್ನು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಬಾಬು ಪತ್ತಾರ್ ಇವರ ಉಪಸ್ಥಿತಿಯಲ್ಲಿ ಮಾಡಲು ಸಭೆ ನಡೆಸಲಾಯಿತು.

promotions

ಸಭೆಯಲ್ಲಿ ನಿಗಮದ ಅಧ್ಯಕ್ಷರು ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಕೆ ಎ ಎಸ್ ಹಾಗೂ ಐ ಎ ಎಸ್ ಓದುವ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಹಾಸ್ಟೆಲ್ ವ್ಯವಸ್ಥೆ ಉಚಿತವಾಗಿ ಇರುವುದರ ಬಗ್ಗೆ ಮಾಹಿತಿ ನೀಡಿದರು ಸಮಾಜದ ಸಂಘಟನೆ ಬಗ್ಗೆ ತಿಳಿಸಿದರು ಪ್ರತಿ ತಾಲ್ಲೂಕು ಹೋಬಳಿ ಜಿಲ್ಲಾ ಮಟ್ಟದಲ್ಲಿರುವ ತೀರಾ ಬಡಕುಟುಂಬದ ವಿಶ್ವಕರ್ಮರ ಕುಟುಂಬಗಳನ್ನು ಗುರುತಿಸುವ ಬಗ್ಗೆ ತಿಳಿಸಿದರು ಆಹಾರ ಕಿಟ್ ವಿತರಣೆ ಬಗ್ಗೆ ಚರ್ಚಿಸಲಾಯಿತು ಹೋಬಳಿ ಮಟ್ಟದಲ್ಲಿ ವಿಶ್ವಕರ್ಮ ಸಮಾಜದ ಜನಾಂಗದವರಿಗೆ ಶವ ಸಂಸ್ಕಾರ ಮಾಡಲು ಸ್ಥಳಾವಕಾಶ ಇಲ್ಲದಿರುವ ಬಗ್ಗೆ ಚರ್ಚಿಸಿದರು ಕೋವಿದ್ ಸಂದರ್ಭದಲ್ಲಿ ಅನಾರೋಗ್ಯದ ಬಗ್ಗೆ ಹಾಸ್ಪಿಟಲ್ ನಲ್ಲಿ ಬೆಡ್ ಸಿಗದೇ ಇರುವ ಬಗ್ಗೆ ಚರ್ಚಿಸಿದರು ಜಿಲ್ಲೆಯಲ್ಲಿರುವ ಪ್ರತಿ ತಾಲ್ಲೂಕು ಹೋಬಳಿ ಮಟ್ಟದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಆಯಾ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಮಾಹಿತಿ ನೀಡಿದರು.

promotions

ಬೆಳಗಾವಿ ಜಿಲ್ಲೆಯ ಸರಕಾರಿ ಜಾಗದಲ್ಲಿ ಶಿಲ್ಪ ಕಲಾ ಭವನ ನಿರ್ಮಾಣದ ಬಗ್ಗೆ ಯೋಚನೆ ಮಾಡುವುದಾಗಿ ತಿಳಿಸಿದರು ಈ ಜಿಲ್ಲಾ ಮಟ್ಟದ ಪಂಚ ಕಸುಬುಗಳ ವಸ್ತು ಪ್ರದರ್ಶನ ಮಾಡುವುದರ ಬಗ್ಗೆ ಮಾಹಿತಿ ನೀಡಿದರು. ಹೆಣ್ಣು ಮಕ್ಕಳಿಗೆ ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು ವಿಶ್ವಕರ್ಮ ಸಮಾಜದ ಪ್ರತಿಯೊಂದು ಹೆಣ್ಣು ಮಗಳು ಸ್ವಾಭಿಮಾನಿಯಾಗಿ ಸ್ವ ಉದ್ಯೋಗ ಮಾಡಿಕೊಂಡು ಸ್ವತಂತ್ರವಾಗಿ ಬದುಕಿ ಬಾಳಬೇಕು ಎಂಬ ಮಾಹಿತಿಯನ್ನು ನೀಡಿದರು ಮುದ್ರಾ ಲೋನ್ ಬಗ್ಗೆ ಮಾಹಿತಿ ನೀಡಿದರು ನಿಗಮದ ಅಧ್ಯಕ್ಷರು ವಿಶ್ವಕರ್ಮ ಸಮಾಜಕ್ಕೆ ಸರ್ಕಾರದಿಂದ ಬರುವಂತಹ ಎಲ್ಲ ಸೌಲತ್ತುಗಳನ್ನು ಪಡೆದುಕೊಂಡು ಎಲ್ಲಾ ವಿಶ್ವಕರ್ಮರು ತಮ್ಮ ತಮ್ಮ ಕುಟುಂಬಗಳನ್ನು ಅಭಿವೃದ್ಧಿ ಮಾಡಿ ಕೊಳ್ಳಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

ವಿಶ್ವಕರ್ಮ ಸೇವಾ ಸಮಿತಿಯ ಸಭೆಯಲ್ಲಿ ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯುತ ಬಿ ಆರ್ ಬಡಿಗೇರ್ ಸರ್ ಬೆಳಗಾವಿ ಜಿಲ್ಲೆಯ ಉಮೇಶ ಪತ್ತಾರ ಹೊರ ದೇಶದಲ್ಲಿರುವ ದುಬೈನ ಕೋ ಯತ್ತ ಎಂಬಲ್ಲಿರುವ ಶ್ರೀಯುತ ಪ್ರಸನ್ನ ವಿಶ್ವಕರ್ಮ ಸರ್ ಚಿಕ್ಕೋಡಿಯ ಶ್ರೀಶೈಲ ಬಡಿಗೇರ ಹುಕ್ಕೇರಿಯ ಗಜಾನನ ಬಡಿಗೇರ ರವಿ ಬಡಿಗೇರ ಕಾಗವಾಡದ ದೇವದತ್ ಬಡಿಗೆರ ಅಥಣಿ ಪ್ರಭಾಕರ ಪೋತದಾರ ಬೇಬಿ ವಿಶ್ವಕರ್ಮ ಹಾಗೂ ರಾಘವೇಂದ್ರ ಪತ್ತಾರ ವೈದ್ಯರು ಘಟಫ್ರಭಾ ಸಮಾಜದ ಇನ್ನಿತರ ಎಲ್ಲಾ ಮುಖಂಡರುಗಳು ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು.

Read More Articles