ಜಲಮಂಡಳಿಯ ನಿರ್ಲಕ್ಷ್ಯ ಕ್ಕೆ ನಿತ್ಯ ಕುಡಿಯುವ ನೀರು ಪೋಲು

ಬೆಳಗಾವಿ:ನಗರದ ಹೃದಯಭಾಗದಲ್ಲೇ ಇರುವ ಸಿಟಿ ಪೊಲೀಸ್ ಲೈನ್.ನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಒಂದು ತಿಂಗಳಾಯಿತು. ಆದರೆ, ಸಂಬಂಧಿತ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಮನ ಹರಿಸದ್ದರಿಂದ ನಿತ್ಯವೂ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿದೆ.

promotions

ಒಂದು ತಿಂಗಳಿಂದ ನೀರು ಪೋಲಾಗುತ್ತಿದ್ದರೂ, ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿಲ್ಲ. ಇದರಿಂದ ಸುತ್ತಲಿನ ಪ್ರದೇಶ ಕೆರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಅಧಿಕಾರಿಗಳ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

promotions

ಅಪಾಯಕ್ಕೆ ಆಹ್ವಾನ:

ಕಳೆದೊಂದು ತಿಂಗಳಿಂದ ನೀರು ಪೋಲಗುತ್ತಿದ್ದು, ಇದೇ ಸ್ಥಳದಲ್ಲಿ ವಿದ್ಯುತ್ ಪರಿವರ್ತಕ ಇದೆ. ವಿದ್ಯುತ್ ಪರಿವರ್ತಕ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಯಾವುದೇ ಕ್ಷಣದಲ್ಲಿ ದುರ್ಘಟನೆ ಸಂಭವಿಸುವ ಸಾಧ್ಯತೆ ಇದೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಜನ ಸಿಡಿಮಿಡಿಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗುವ ಮುನ್ನ ಅಧಿಕಾರಿಗಳು ಗಮನ ಹರಿಸಬೇಕು.

ದುರಸ್ತಿ ಗೊಳ್ಳದ ನೀರಿನ ಟ್ಯಾಂಕ್ :

ಸಿಟಿ ಲೈನ್ ಪೊಲೀಸ್ ವಸತಿಗೃಹಗಳ ಹಳೆಯ ಬಿಲ್ಡಿಂಗ್ ಗಳಲ್ಲಿ ನೀರಿನ ಟ್ಯಾಂಕ್ ಗಳೆಲ್ಲ ದುರಸ್ತಿಯಲ್ಲಿದ್ದು ದುರಸ್ತಿ ಮಾಡದ ಕಾರಣ ಸಾವಿರಾರು ಲೀಟರ್ ನೀರು ದಿನವೂ ಪೋಲಾಗುತ್ತಿದೆ ಒಂದೆಡೆ ಬೆಳಗಾವಿಯ ನಗರದಲ್ಲಿ ನೀರಿನ ಹಾಹಾಕಾರ ಉಂಟಾಗಿದ್ದು ಏಳು ದಿನಗಳಿಗೊಮ್ಮೆ ನೀರು ನೀಡುತ್ತಿದ್ದು ಇಲ್ಲಿ ಮಾತ್ರ ನಿರಿನ್ನು ಮನಸೋ ಇಚ್ಛೆ ಪೋಲ್ ಮಾಡುತ್ತಿರುವದು ವಿಪರ್ಯಾಸವೇ ಸರಿ.

Read More Articles