
ಬೆಳಗಾವಿ ಇಂಜನಿಯರುಗಳಿಂದ ನೀರಾವರಿ ತಜ್ಞ ಶ್ರೀ ಎಸ್ ಜಿ ಬಾಳೇಕುಂದ್ರಿ ಯವರ 30ನೇ ಪುಣ್ಯ ತಿಥಿ ಆಚರಣೆ
- 14 Jan 2024 , 7:19 PM
- Belagavi
- 156
ಬೆಳಗಾವಿ: ಇಲ್ಲಿನ ಇನ್ಸ್ಟೂಟ ಆಫ್ ಇಂಜನಿಯರ್ಸ ಕೇಂದ್ರದಲ್ಲಿ ನಿನ್ನೆಯ ದಿನ ನೀರಾವರಿ ತಜ್ಞ ಶ್ರೀ ಎಸ್ ಜಿ ಬಾಳೇಕುಂದ್ರಿಯವರ "30ನೇ ಪುಣ್ಯ ತಿಥಿ"ಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾಯ೯ದಶಿ೯ಗಳಾದ ಶ್ರೀ ಜಿ ಸಿ ತಲ್ಲೂರ ಅವರು ಆಗಮಿಸಿದ್ದರು.

ಅವರು ಶ್ರೀ ಬಾಳೇಕುಂದ್ರಿಯವರ ನಿಪುಣತೆ,ನಿಷ್ಟುರತೆ,ಪ್ರಾಮಾಣಿಕತೆ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ತಿಳಿಸಿದರು.ಅವರಂತಹ ಮಹಾಪುರುಷರ ಪುಣ್ಯ ತಿಥಿ ಆಚರಣೆ ಮಾಡುತ್ತಿರುವುದು ಅತ್ಯಂತ ಸ್ತುತ್ಯವಾದದ್ದು ಎಂದ ರಲ್ಲದೇ ಯುವಕರು ಅವರಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದ
ರು.

ಮಾನವನು ನಿಸರ್ಗದಿಂದ ಪಡೆದ ಅನೇಕ ಸವಲತ್ತುಗಳ ಋಣ ತೀರಿಸುವ ಬಗ್ಗೆ ಬಲು ಮಾರ್ಮಿಕವಾಗಿ ತಿಳಿಸಿಕೊಟ್ಟರು.
ಗೌರವ ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯ ಇಂಜನಿಯರ್ ಶ್ರೀ ವಿ ಬಿ ಬೆಲ್ಲದ ಅವರು ತಮ್ಮ ಹಾಗೂ ಬಾಳೇಕುಂದ್ರಿಯವರ ಮಧ್ಯ ಇದ್ದ ಒಡನಾಟ ದ ಬಗ್ಗೆ ತಿಳಿಸುತ್ತ ಅಂತಹ ಮೇಧಾವಿಗಳು ಮತ್ತೆ ಹುಟ್ಟಿ ಬರಬೇಕು ಎಂದು ಹಾರೈಸಿದರು.ಶ್ರೀ ಬೆಲ್ಲದ ಅವರು ತಮ್ಮ ಹಸ್ತದಿಂದ ಬರೆದ ಚಿತ್ರ ವನ್ನು ಸಂಸ್ಥೆಗೆ ನೀಡಿದರು.
ಪ್ರಾರಂಭದಲ್ಲಿ ಬಾಳೇಕುಂದ್ರಿಯವರ ಭಾವಚಿತ್ರ ಪೂಜೆ ನೆರವೇರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಚೇರಮನ್ ಶ್ರೀ ರಮೇಶ ಜಂಗಲ ವಹಿಸಿದ್ದರು.
ಶ್ರೀ ಸಿ ಬಿ ಹಿರೇಮಠ ಅವರು ಸವ೯ರನ್ನೂ ಸ್ವಾಗತಿಸಿದರು.ಶ್ರೀ ಜೆ ಸಿ ನೂಲಿ ಅವರು ಅತಿಥಿಗಳ ಪರಿಚಯ ನೀಡಿದರು.ಪ್ರೊ ಶ್ರೀಮತಿ ಭಾರತಿ ಚಿನಿವಾಲರ ಅವರು ವಂದನಾಪ೯ಣೆ ಮಾಡಿದರು.
ಸಮಾರಂಭದ ತರುವಾಯ ಮಹೇಶ್ವರಿ ಅಂಧ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಭೋಜನ ಹಾಗೂ ಹಣ್ಣುಗಳನ್ನು ನೀಡಲಾಯಿತು.
ಸಮಾರಂಭದಲ್ಲಿ ಹಿರಿಯ ಇಂಜನಿಯರುಗಳಾದ ಸವ೯ಶ್ರೀ ವಿ ಬಿ ಜಾವೂರ,ಎಸ್,ವಾಯ್ ಕುಂದರಗಿ,ವಿ ಕೆ ಹುಕ್ಕೇರಿ,ರವೀಂದ್ರ ಕಲ್ಯಾಣ, ಎ ಎಲ್ ವಾಸನ,ಸಿ ಬಿ ಹಿರೇಮಠ, ಬಿ ಜಿ ಧರೆಣ್ಣಿ,ಬಿ ಎಂ ಕಳ್ಳಿಗುಡ್ಡ, ಎಂ ಪಿ ಮೇತ್ರಿ,ಜೆ ಸಿ ನೂಲಿ,ಆರ್ ಬಿ ಧಾಮಣ್ಣವರ, ಎಸ್ ವಾಯ್ ಪವಾರ,ನರಸಣ್ಣವರ, ನಾಡಗೌಡ, ಶ್ರೀಮತಿ ಚಿನಿವಾಲರ ಮತ್ತು ಬಾಳೇಕುಂದ್ರಿ ಪರಿವಾರದ ಉಪಸ್ಥಿತರಿದ್ದರು.