ಕನಯ್ಯ ಹತ್ಯೆ‌ ಖಂಡಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

ಬೆಳಗಾವಿ: ಉದಯಪುರ ಹಿಂದೂ ಟೈಲರ್ ಕನಯ್ಯಲಾಲ ಹತ್ಯೆ ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನಾ ಸೇರಿದಂತೆ ವಿವಿಧ ಹಿಂದೂ ಸಂಘಟನೆ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

promotions

ಭಾರತ ದೇಶದಲ್ಲಿ ಹಿಂದೂಗಳ ಮೇಲೆ‌ ಅಟ್ಟಹಾಸ ಮೆರೆಯುತ್ತಿರುವ ಜಿಹಾದಿಗಳ ಮಟ್ಟ ಹಾಕಬೇಕಿದೆ. ನರೇಂದ್ರ ‌ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ‌ ವಿಕಾಸ ಎಂದು ಎಲ್ಲರನ್ನು ಜೊತೆಗೆ ಕರೆದುಕೊಂಡು‌ ಹೋಗುತ್ತಿದ್ದಾರೆ. ಆದರೆ ಇಂಥ ಕೆಲ ಕ್ರಿಮಿಗಳು ದೇಶದ ಒಳಗಡೆ ಹಿಂದೂ ಹತ್ಯೆ ಮಾಡುತ್ತಿರುವುದನ್ನು ಖಂಡಿಸಿದ್ದಾರೆ.

promotions

ಮಾಜಿ ಶಾಸಕ ಸಂಜಯ ಪಾಟೀಲ, ಉಜ್ವಲಾ ಬಡವನಾಚೆ, ಕಿರಣ ಜಾಧವ, ಧನಂಜಯ ಜಾಧವ, ಕೃಷ್ಣಾ ಭಟ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Read More Articles