
ಇದು ಕೆಸರಿನ ಗುಂಡಿಯಲ್ಲ ಉರ್ದುಶಾಲೆ
- 14 Jan 2024 , 7:19 PM
- Belagavi
- 66
ಬೆಳಗಾವಿ: ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತತಗೊಂಡಿದ್ದು, ಸತತ ಮಳೆಗೆ ಗಾಂಧಿನಗರದ ಉರ್ದು ಶಾಲೆಯ ಆವರಣ ಕೆಸರಿನಿಂದ ಕೂಡಿದ್ದು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲ ಬಂತೆಂದರೆ ಸಾಕು ಗಾಂಧಿನಗರದ ಉರ್ದುಶಾಲೆಗೆ ತೆರಳುವ ವಿದ್ಯಾರ್ಥಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿಕ್ಷಣ ಇಲಾಖೆ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.