ಬೆಳಗಾವಿ: ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಆಟೋ ನಗರದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ವಿಶ್ವ ಪರಿಸರ ದಿನದವನ್ನು ನಾವು ಉಳಿಯೋಣ, ಪರಿಸರವನ್ನು ಉಳಿಸೋಣ, ನಮ್ಮಿಂದ ಪರಿಸರವಲ್ಲ, ಪರಿಸರದಿಂದ ನಾವು. ಎಂಬ ಘೋಷ ವಾಕ್ಯದೊಂದಿಗೆ ಅರ್ಥಪೂರ್ಣವಾಗಿ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವುದರ ಮುಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಬೆಳಗಾವಿ ಕೆನರಾ ಬ್ಯಾಂಕ ಉಪ ಮಹಾಪ್ರಭಂದಕರಾದ ಮೆನನ್ ಭಾಸ್ಕರ ರಾಜನ್, ಕ್ಷೇತ್ರೀಯ ಪ್ರಭಂದಕ ಕೃಷ್ಣಾ ಕುಲಕರ್ಣಿ, ಆರ್. ಟಿ. ಕಾಂಬಳೆ, ವ್ಹಿ. ರಾಹುಲ, ಎಸ್. ಕೆ. ಭಾರದ್ವಾಜ್, ಲಕ್ಷ್ಮೀಕಾಂತ ಅ. ಪಾಟೀಲ ಸೇರಿದಂತೆ ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಕೆನರಾ ಬ್ಯಾಂಕನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.