
ನಗರದಲ್ಲಿ ಭ್ರಷ್ಟಾಚಾರದ ಜೊತೆಗೆ ಜಾತಿಯತೆ ಬಂದಿದ್ದು ದುರ್ದೈವ: ಸುಜೀತ
- 14 Jan 2024 , 7:45 PM
- Belagavi
- 115
ಬೆಳಗಾವಿ :ನಗರದಲ್ಲಿ ಭ್ರಷ್ಟಾಚಾರದ ತಾಂಡವದ ಜೊತೆ ಜೊತೆಗೆ ಸರಕಾರಿ ಇಲಾಖೆಯಲ್ಲಿ ಜಾತಿಯತೆ ನಡೆದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ನಡೆದಿರುವುದು ದುರ್ದೈವದ ಸಂಗತಿ ಎಂದು ಸಾಮಾಜಿಕ ಹೋರಾಟಗಾರ ಸುಜೀತ ಮುಳಗುಂದ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನ ಮಾಡುವ ನಿಟ್ಟಿನಲ್ಲಿ ದಶಕಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಬೆಳಗಾವಿ ನಗರದಲ್ಲಿ ಕೆಲ ಸರಕಾರಿ ಇಲಾಖೆಯಲ್ಲಿ ಜಾತಿಯತೆ ಮಾಡುತ್ತಿರುವುದು ಕಳವಳಕಾರಿ ಎಂದರು.

ಕೆಲ ಇಲಾಖೆಯಲ್ಲಿ ಜಾತಿಯತೆ ಮಾಡಿ ಧರ್ಮ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿರುವುದು ವಿಪರ್ಯಾಸ. ಪೊಲೀಸ್ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಭೂ ಮಾಫೀಯಾದಲ್ಲಿ ತೊಡಗಿದ್ದಾರೆ ಶೀಘ್ರದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.