ನಾಲ್ಕೂವರೆ ವರ್ಷದಲ್ಲಾದ ಅಭಿವೃದ್ಧಿ ಹೆಮ್ಮೆ ತಂದಿದೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ:  ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದೆಂದೂ ಕಾಣದಂಥ ಅಭಿವೃದ್ಧಿ ಕೆಲಸಗಳನ್ನು ಕೇವಲ ನಾಲ್ಕೂವರೆ ವರ್ಷಗಳಲ್ಲಿ ಮಾಡಿರುವುದಾಗಿ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ‌ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

promotions

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರಸ್ವತಿ ನಗರದಲ್ಲಿ ಆಯೋಜಿಸಲಾಗಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು,  "ಎಲ್ಲ ಕ್ಷೇತ್ರಗಳಲ್ಲಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿ ಕೆಲಸಗಳ ಮೂಲಕ ಮುನ್ನೆಡೆಸಿ, ನಿಸ್ವಾರ್ಥ ಮನೋಭಾವನೆಯಿಂದ ತಮ್ಮೆಲ್ಲರ ಸೇವೆ ಮಾಡುತ್ತಿದ್ದೇನೆ," ಎಂದರು.

promotions

"ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಯಾವತ್ತಿಗೂ ಮರೆಯಲಾರದಂತ ಅನುಭವ. ಎಂದಿನಂತೆ ನಿಮ್ಮ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ," ಎಂದು ಅವರು ಹೇಳಿದರು. 

ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳು, ಹಿರಿಯರು, ನೂರಾರು ಮಹಿಳೆಯರು, ತಂದೆ ತಾಯಂದಿರು, ಯುವರಾಜಣ್ಣ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ, ಮೋಹನ ಸಾಂಬ್ರೇಕರ್, ರಾಜೇಶ ನಾಯ್ಕ, ಅಂಜನಾ ನಾಯ್ಕ, ಮಂಜುಳಾ ನಾಯ್ಕ, ಶೀಲಾ ಸಾಂಬ್ರೇಕರ್, ಶೀಲಾ ಹಳಕುಂಡೆ, ಶಾಹಿರಾಬಾನು ಹುಕ್ಕೇರಿ, ಯಲ್ಲಪ್ಪ ನಾಯ್ಕ, ರಾಜು ದಂಡಗಲ್ಕರ್, ಭರಮಣ್ಣ ಹಲಗೇಕರ್, ಜ್ಯೋತಿಬಾ ಪಾಟೀಲ, ಅನುರಾಧಾ ವಾಘ್ಮೋರೆ, ಪದ್ಮಾ ಹಲಕುತ್ತಿ, ಸಚಿನ್ ಜಾಧವ್, ಲೋಬೊ ಬಾಯಿ, ಜೈನುದ್ದೀನ್ ಮುಜಾವರ್, ಪಕ್ಷದ ಕಾರ್ಯಕರ್ತರು ಹಾಗೂ ಆಪ್ತ ಸಹಾಯಕರು ಉಪಸ್ಥಿತರಿದ್ದರು.

Read More Articles