ಇದೆ ತಿಂಗಳು ನಡೆಯಲಿದೆ ಕಣಬರ್ಗಿ ಸಿದ್ದೇಶ್ವರ ಮಂದಿರದ ಭವ್ಯ ಕಳಸಾರೋಹಣ ಕಾರ್ಯಕ್ರಮಕ ಇಲ್ಲಿದೆ ಸಂಕ್ಷಿಪ್ತ ವರದಿ

ಫೆಬ್ರವರಿ  12 13 14ರಂದು  ಕಣಬರ್ಗಿ ಶ್ರೀ ಸಿದ್ದೇಶ್ವರ ದೇವಸ್ಥಾನದ  ಭವ್ಯ ಉದ್ಘಾಟನೆ  

promotions

ದೇವಸ್ಥಾನ ಕಟ್ಟಲು  ಭಕ್ತಾದಿಗಳಿಂದ ದಾನ ಹರಿದು ಬಂದಿದೆ.

promotions

ಭವ್ಯ ಮೆರವಣಿಗೆ ಮೂಲಕ ಕಾರ್ಯಕ್ರಮ ಪ್ರಾರಂಭ.

ಶಾಸಕ ಅನಿಲ ಬೆನಕೆ ಮಾಡಿದ ಹಲುವು ಜೀರ್ಣೋದ್ದಾರ ಕಾರ್ಯಗಳನ್ನು  ಶ್ಲಾಘಿಸಿದ್ದಾರೆ.

ಬೆಳಗಾವಿ : ಜಿಲ್ಲೆಯ ಕಣಬರ್ಗಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಸಿದ್ದೇಶ್ವರ ಮಂದಿರದ ಪುರಾತನ ಕಟ್ಟಡವನ್ನು ಜಿರ್ಣೋದ್ದಾರ ಮಾಡಿ ನವೀಕೃತ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿಗೆ ಅನೇಕ ಭಕ್ತರು ಸಹ ಉದಾರವಾಗಿ ದೇಣಿಗೆಯನ್ನು ನೀಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ದೇವಾಲಯದ ನವೀಕೃತ ಭವ್ಯ ಕಟ್ಟಡದ ಭವ್ಯ ಉದ್ಘಾಟನಾ, ವಾಸ್ತುಶಾಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಶ್ರೀ ಸಿದ್ಧೇಶ್ವರ ವ್ಯವಸ್ಥಾಪಕ ಮಂಡಳಿ ಕಣಬರ್ಗಿ ಹಾಗೂ ಶ್ರೀ ಸಿದ್ದೇಶ್ವರ ಭಕ್ತ ಮಂಡಳಿ ಕಣಬರ್ಗಿ ಮತ್ತು ಕಣಬರ್ಗಿ ಗ್ರಾಮದ ಭಕ್ತಾದಿಗಳ ವತಿಯಿಂದ ಸಮಾರಂಭಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಗಳು

ರವಿವಾರ ದಿ. 12ನೇ ಫೆಬ್ರವರಿ 2023 ರಂದು ಬೆಳಿಗ್ಗೆ 8.00 ಗಂಟೆಗೆ ಗ್ರಾಮದೇವಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ಶ್ರೀ ಸಿದ್ಧೇಶ್ವರ ದೇವಸ್ಥಾನದ ವರೆಗೆ ಗ್ರಾಮದ ಭಕ್ತಮಂಡಳಿಯ ವತಿಯಿಂದ ಶ್ರೀ ಸಿದ್ದೇಶ್ವರ ಕಳಸ ಮೇರವಣಿಗೆ ಹಾಗೂ
ಮುತ್ತೈದೆಯರಿಂದ  ಕುಂಭಹೊತ್ತು ಮೆರವಣಿಗೆ ನಡೆಯಲಿದೆ.

ಸೋಮವಾರ ದಿ. 13ನೇ ಫೆಬ್ರವರಿ 2023 ರಂದು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 12.00 ಗಂಟೆಯ ವರೆಗೆ ಸಿದ್ದೇಶ್ವರ ಮಂದಿರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಗಣಹೋಮವನ್ನು ಮತ್ತು ದೇವಸ್ಥಾನದ ಆವರಣದಲ್ಲಿ ರಾಷೋಘ್ನ ಹೋಮವನ್ನು ಸಂಜೆ 6.00 ಗಂಟೆ ಯಿಂದ 9.00 ಗಂಟೆ ಯವರಿಗೆ ಹಮ್ಮಿಕೊಳಲಾಗಿದೆ.

ಮಂಗಳವಾರ ದಿ. 14ನೇ ಫೆಬ್ರವರಿ 2023 ರಂದು ಬೆಳಿಗ್ಗೆ 6.30 ರಿಂದ 11.00 ಗಂಟೆಗೆಯವರೆಗೆ ನವೀಕೃತ ಸಮಾರಂಭ ಹಾಗೂ ಮಧ್ಯಾಹ್ನ 12.00 ರಿಂದ 4.00 ಗಂಟೆಯವರೆಗೆ ಮಹಾಪ್ರಸಾದವನ್ನು ಆಯೋಜಿಸಲಾಗಿದೆ.

ಮಹಾಶಿವರಾತ್ರಿಯ ಕಾರ್ಯಕ್ರಮಗಳು 

ಶುಕ್ರವಾರ ದಿ. 17ನೇ ಫೆಬ್ರವರಿ 2023 ರಂದು ಬೆಳಿಗ್ಗೆ 10.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಅಲಂಕೃತ ಚಕ್ಕಡಿ ಬಂಡಿಯಲ್ಲಿ ಶ್ರೀ ಸಿದ್ದೇಶ್ವರ ದೇವರ ಮೆರವಣಿಗೆ ನಡೆಯಲಿದೆ.

ಶನಿವಾರ ದಿ. 18ನೇ ಫೆಬ್ರವರಿ 2023 ರಂದು ಬೆಳಿಗ್ಗೆ 11.00 ಗಂಟೆಯಿಂದ ಸಂಜೆ 5.00 ಗಂಟೆಯವರಿಗೆ ಮೆರವಣಿಗೆಯು ದೇವಸ್ಥಾನಕ್ಕೆ ತಲುಪುವುದು,

ರವಿವಾರ ದಿ. 19ನೇ ಫೆಬ್ರವರಿ 2023 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮಹಾಪ್ರಸಾದ ಆಯೋಜಿಸಲಾಗಿದೆ.

Read More Articles