ಬ್ರಿಟಿಷ್‌ ರಿಗೆ ಕ್ಷಮೆ ಕೇಳಿದವ ವೀರ ಹೇಗೆ ಸಾಧ್ಯ: ಪೃಥ್ವಿ ರೆಡ್ಡಿ

ಬೆಳಗಾವಿ: ಬ್ರಿಟಿಷ್ ರಿಗೆ ಕ್ಷಮೆ ಕೇಳಿರುವ ಸಾವರ್ಕರ್ ಅವರನ್ನು "ವೀರ" ಎಂದು ಕರೆಯುವುದು ಸರಿಯಲ್ಲ ಎಂದು ಆಮ್ ಆದ್ಮಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.

promotions

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

promotions

ಸುಮಾರು ಜನ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಕ್ಷಮೆ ಕೇಳಿದ್ದ ವ್ಯಕ್ತಿ ಸಾವರ್ಕರ್ ಅವರಿಗೆ ವೀರ ಎಂದು ಕರೆಯುವುದು ಸರಿಯಲ್ಲ. ಸಾವರ್ಕರ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ‌. ಆದರೆ ಬ್ರಿಟಿಷ್ ರಿಗೆ ಕ್ಷಮೆ ಕೇಳಿದ ವ್ಯಕ್ತಿಯನ್ನು ಹೇಗೆ ವೀರ ಎನ್ನುಲು ಸಾಧ್ಯ ಎಂದು ಪ್ರಶ್ನಿಸಿದರು.

ದೇಶದ ಮುಂದೆ ಮೂರು ರೀತಿಯ ರಾಜಕೀಯ ನಡೆಯುತ್ತಿದೆ. ಕುಟುಂಬ ಪರ ರಾಜಕೀಯ, ಸ್ನೇಹಿತರ ರಾಜಕೀಯ ಹಾಗೂ ಆಪ್ ನಿಂದ ಜನಪರ ರಾಜಕೀಯ ಇದನ್ನು ಭಾರತ ವಾರ್ ರಾಜಕೀಯ ಮಾಡುತ್ತಿದ್ದೇವೆ ಎಂದರು.

ಆಪ್ ನಿಂದ ಮನೆ ಮನೆಗೆ ಹೋಗಿ ಜನರ ಅಭಿಪ್ರಾಯ ಸಂಗ್ತಹಿಸುತ್ತಿದ್ದೇವೆ. ಹತ್ತು ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ‌. ಆದರೆ ನಮ್ಮ ಜನರಿಗೆ ಲಾಭವಾಗಿಯೇ ಎಂದು ಸರ್ವೆ ನಡೆಸುತ್ತಿದ್ದೇವೆ. ಕೇಂದ್ರ ಸರಕಾರ ಎಷ್ಟು ಜನರಿಗೆ ಹಾಗೂ ಯಾರಿಗೆ ಸಾಲ ಮನ್ನಾ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಗುಜರಾತ್ ನಲ್ಲಿ ಮೂರು ಲಕ್ಷ ಕೋಟಿ ಸಾಲ ಮಾಡಿರುವುದು ಯಾವ ಕಾರಣಕ್ಕೆ ಎಂದ ಅವರು, ರಾಜ್ಯದಲ್ಲಿ 40% ಸರಕಾರ ಇನ್ನೊಂದು ಕಡೆ ದೆಹಲಿಯಲ್ಲಿ 0% ಸರಕಾರದ ಅಭಿವೃದ್ಧಿ ಕಾರ್ಯಗಳು ಇದರಲ್ಲಿ ಯಾವ ಸರಕಾರ ಮಹತ್ವದ್ದು ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದರು.

ದೆಹಲಿಯಲ್ಲಿ ಕಳೆದ ಏಳು ವರ್ಷದಿಂದ ನಯಾಪೈಸೆ ವಿದ್ಯುತ್ ಬೆಲೆ ಏರಿಕೆ ಮಾಡಿಲ್ಲ. ಎಲ್ಲರಿಗೂ ಉಚಿತ ‌ನೀರು ನೀಡುತ್ತಿದ್ದೇವೆ. ಆದರೆ ಕರ್ನಾಟಕದಲ್ಲಿ ಪ್ರತಿ ‌ವರ್ಷ ವಿದ್ಯುತ್ ದರ ಏರಿಕೆ ಮಾಡುತ್ತಾರೆ.

ಬೆಳಗಾವಿ ‌ಜಿಲ್ಲೆಯ ಜಾರಕಿಹೊಳಿ ಕುಟುಂಬ ರಾಜ್ಯ ರಾಜಕಾರಣವನ್ನು‌ ಬದಲಾವಣೆ ಮಾಡುವ ತಾಕತ್ತು ಹೊಂದಿದ್ದಾರೆ‌. ಆದರೆ ಬೆಳಗಾವಿಯಲ್ಲಿನ ಸರಕಾರಿ ಶಾಲೆಯ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಪ್ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಮಾತನಾಡಿ, ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಅವರು, ಬಿಜೆಪಿಯ ಶಾಸಕರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಲ್ಲದೆ ಬೆಳಗಾವಿಯ ಬಿಜೆಪಿ ಶಾಸಕರೊಬ್ಬರು ಕಳೆದ 9 ವರ್ಷಗಳಿಂದ ಭ್ರಷ್ಟಾಚಾರ ಆರೋಪ ಹೊತ್ತಿದ್ದಾರೆ ಅವರು ಮೇಲೆ ಕ್ರಮ ಇಲ್ಲ ಎಂದು ಪ್ರಶ್ನಿಸಿದರು.

ಶಂಕರ ಹೆಗಡೆ, ಸಂಪತಕುಮಾರ ಶೆಟ್ಟಿ,‌ಕ್ಯಾಪ್ಟನ್ ಗಿರೀಶ್, ಅರವಿಂದ ನಡಮಿಂಚಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles