
ಅಗ್ನಿ ಪ್ರೈಮ್ ಹೊಸ ಪೀಳಿಗೆಯ ಬ್ಯಾಲಿಸ್ಟಿಕ್ ಮಿಸೈಲ್ ಯಶಸ್ವಿ ಪರೀಕ್ಷೆ ನಡೆಸಿದ ಭಾರತ
- 14 Jan 2024 , 8:05 PM
- Odisha
- 138
ಒಡಿಶಾ : ಅಗ್ನಿ ಪ್ರೈಮ್ ಹೊಸ ಪೀಳಿಗೆಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಒಡಿಶಾ ಕರಾವಳಿಯಲ್ಲಿ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಒಡಿಶಾ ಕರಾವಳಿಯ ಬಾಲಸೋರ್‌ನಿಂದ ಭಾರತ ಶುಕ್ರವಾರ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಅಗ್ನಿ ಪ್ರೈಮ್ ಹೊಸ ತಲೆಮಾರಿನ ಮತ್ತು ಅಗ್ನಿ ವರ್ಗದ ಕ್ಷಿಪಣಿಗಳ ಮುಂದುವರಿದ ರೂಪಾಂತರವಾಗಿದೆ. ಇದು ಎರಡು ಹಂತದ ಕ್ಯಾನಿಸ್ಟರೈಸ್ಡ್ ಕ್ಷಿಪಣಿಯಾಗಿದ್ದು, 1,000-2,000 ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಈ ಪರೀಕ್ಷೆಯಲ್ಲಿ ಪರಮಾಣು ಸಾಮರ್ಥ್ಯದ ಕಾರ್ಯತಂತ್ರದ ಕ್ಷಿಪಣಿ ಅಗ್ನಿ ಪ್ರೈಮ್‌ಗೆ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಕ್ಷಿಪಣಿ ಪರೀಕ್ಷೆಯು ತನ್ನ ಎಲ್ಲಾ ಮಿಷನ್ ಉದ್ದೇಶಗಳನ್ನು ಉನ್ನತ ಮಟ್ಟದ ನಿಖರತೆಯೊಂದಿಗೆ ಪೂರೈಸಿದೆ.