ಸಂವಿಧಾನ ಜ್ಯೋತಿ ಯಾತ್ರೆಗೆ ಸ್ವಾಗತ ಕೋರಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್.

krpp

ಬೆಳಗಾವಿ:  ಮುಂಬೈ ಮೂಲಕ ಬೆಳಗಾವಿಗೆ ಗುರುವಾರ ಆಗಮಿಸಿದ ಭಾರತ ಸಂವಿಧಾನದ ಪಿತಾಮಹ ಜ್ಯೋತಿ ಯಾತ್ರೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಿರೇಬಾಗೇವಾಡಿಯಲ್ಲಿ ಸ್ವಾಗತಿಸಿ ಶುಭ ಕೋರಿದರು. 
  
ಈ ಜ್ಯೋತಿ ಯಾತ್ರೆಯು ಮುಂಬೈ ಮೂಲಕ ಹಿರೇಬಾಗೇವಾಡಿಗೆ ಆಗಮಿಸಿದ್ದು ಸಂಜೆ ಬೈಲಹೊಂಗಲದ ಅಂಬೇಡ್ಕರ್ ಉದ್ಯಾನವನಕ್ಕೆ ತಲುಪಲಿದೆ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತಕ್ಕೆ ಸುಭದ್ರವಾದ ಸಂವಿಧಾನವನ್ನು ಕಟ್ಟಿಕೊಟ್ಟಿದ್ದಾರೆ. ಅದು ನಮಗೆಲ್ಲ ಆದರ್ಶವಾಗಿರುವದಲ್ಲದೆ, ಭಾರತ ಇಡೀ ವಿಶ್ವದಲ್ಲೇ ಬಲಿಷ್ಠ ದೇಶವಾಗಲು ಕಾರಣವಾಗಿದೆ. ಈ ಸಂವಿಧಾನ ಯಾತ್ರೆಯು ಗಣರಾಜ್ಯೋತ್ಸವದ ದಿನವೇ ಬೆಳಗಾವಿಗೆ ಆಗಮಿಸಿರುವುದು ವಿಶೇಷವಾಗಿದೆ. ಈ ಯಾತ್ರೆ ಯಶಸ್ವಿಯಾಗಲಿ ಎಂದು ಹೆಬ್ಬಾಳಕರ್ ಹಾರೈಸಿದರು.

Latest Articles