
ಅಥಣಿ ತಾಲೂಕಿನಲ್ಲಿ ಕಳಪೆ ಕಾಮಗಾರಿಗಳದ್ದೇ ಕಾರುಬಾರು !
- 14 Jan 2024 , 6:14 PM
- Belagavi
- 120
ಅಥಣಿ : ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನವರ ಅವರು ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಗುವಂತಹ ಘಟನೆ ಅಥಣಿ ತಾಲೂಕಿನಲ್ಲಿ ನಡೆಯುತ್ತಿವೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರ ಕ್ಷೇತ್ರದಲ್ಲಿ ತೆರೆಮರೆ ಹಿಂದೆ ಕಮೀಷನ್ ದಂಧೆ ನಡೆಯುತ್ತಿದ್ದಿಯಾ ! ಎಂಬ ಗುಮಾನಿ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಒಂದೇ ವರ್ಷದಲ್ಲಿ ಎರಡೆರಡು ಬಾರಿ ರಸ್ತೆ ನಿರ್ಮಾಣ ಮಾಡಿದರೂ, ಕಿತ್ತು ಹೋಗುತ್ತಿದೆ ಡಾಂಬರ್. ಕೈಯಿಂದ ಮುಟ್ಟಿದರೂ ಕಿತ್ತು ಬರುತ್ತಿದೆ ರಸ್ತೆಯ ಡಾಂಬರ್. ಕಳಪೆ ಕಾಮಗಾರಿಯಿಂದ ಮುಗ್ಗರಿಸಿ ಬೀಳುತ್ತಿರುವ ವಾಹನ ಸವಾರರಿಗೆ ಲೆಕ್ಕವಿಲ್ಲ 2 ಕೋಟಿ ರೂಪಾಯಿ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್ ಆಗಿದೆ. ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಬೆಳಗಾವಿ ಜಿಲ್ಲಾ ಪಂಚಾಯತಿ ಇಲಾಖೆಯಿಂದ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಥಣಿ ಪಟ್ಟಣದಿಂದ ಎಕನತ್ತಿಖೋಡಿ ರಸ್ತೆ (ಹಳೆ ಕಿರಣಗಿ ರಸ್ತೆ) ಸುಮಾರು 7 ಕಿಲೋ ಮೀಟರ್ ರಸ್ತೆ, ಕೈಯಿಂದ ಮುಟ್ಟಿದರೂ ಡಾಂಬರು ಕಿತ್ತು ಬರುತ್ತಿದ್ದು ಈ ಕಾಮಗಾರಿ ಕಳಪೆ ಕಾಮಗಾರಿಯಾಗಿದೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಇಲ್ಲಿನ ರಸ್ತೆಗೆ ನೆಪಕ್ಕೆ ಮಾತ್ರ ಒಂದಿಷ್ಟು ಜಲ್ಲಿ ಚೆಲ್ಲಿ, ಡಾಂಬರು ಹರಡಿ ಗುತ್ತಿಗೆದಾರ ಕೈಚೆಲ್ಲಿದ್ದಾರೆ. ಡಾಂಬರು ರಸ್ತೆಯನ್ನು ಕೈಯಿಂದ ಕಿತ್ತರೂ ಕೂಡ ಡಾಂಬರು ಕಿತ್ತು ಕಲ್ಲುಗಳು ಹೊರಬರುತ್ತಿವೆ. ಸಣ್ಣ ವಾಹನ ಓಡಾಡಿದರೂ ರಸ್ತೆ ಗುಂಡಿ ಬೀಳುವಂತಾಗಿದೆ ಎಂದು ರವಿ ಬಡಕಂಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 74 ವರ್ಷದ ನಂತರ ಡಾಂಬರೀಕರಣ ಹೊಂದಿದ ರಸ್ತೆ ಸಂಪೂರ್ಣವಾಗಿ ಕಳಪೆಯಾಗಿದೆ, ಒಂದೇ ವರ್ಷದಲ್ಲಿ ಅದೇ ರಸ್ತೆಯನ್ನು ಎರಡನೆ ಬಾರಿ ನಿರ್ಮಿಸಿದರೂ ಕೂಡ ಕಳಪೆಯಾಗಿದೆ, ನಮ್ಮ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರಿಗೆ ಗುತ್ತಿಗೆ ನೀಡುತ್ತಿದ್ದಾರೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ನೆಪ ಮಾತ್ರಕ್ಕೆ ಕೆಲವರು ಗುತ್ತಿಗೆದಾರರಾಗಿದ್ದು, ಎಲ್ಲ ಕಾಮಗಾರಿಗಳನ್ನು ಚುನಾಯಿತ ಪ್ರತಿನಿಧಿಗಳ ಆಪ್ತರೇ ಮಾಡುತ್ತಾರೆ, ಅಥಣಿ ತಾಲೂಕಿನ ಬಹುತೇಕ ರಸ್ತೆ ಕಾಮಗಾರಿಗಳೆಲ್ಲವೂ ಯಾರದೋ ಗುತ್ತಿಗೆದಾರರ ಹೆಸರಿನಲ್ಲಿ ಪಡೆದು ಚುನಾಯಿತರ ಬೆಂಬಲಿಗರೇ ಮಾಡುತ್ತಿದ್ದಾರೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಳಪೆ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಸುರೇಶ ಮಾಳಿ ಆಗ್ರಹಿಸಿದ್ದಾರೆ.