
ವಿದ್ಯುತ್ ತಾರತಮ್ಯ, ಅವ್ಯವಸ್ಥೆ,ನಿರ್ಲಕ್ಷ ಹಾಗೂ ಅನಧಿಕೃತ ಲೋಡ್ ಶಡ್ಡಿಂಗ್ : ಹೆಸ್ಕಾಂ ವಿರುದ್ದ ರೈತರ ಆಕ್ರೋಶ
- 5 Jan 2024 , 4:32 PM
- Belagavi
- 122
ಕಾಗವಾಡ ಮತಕ್ಷೇತ್ರದ ನಿವಾಸಿಯಾದ ಪ್ರತೀಕ್ ಮಾಳಿ ( At : ಕುಂಬಾರಗುತ್ತಿ Post : ಹಣಮಾಪುರ Tq : ಅಥಣಿ ) ಹೆಸ್ಕಾಂ ಅಧಿಕಾರಿಗಳಿಗೆ ಅರ್ಜಿಯ ನೀಡುವ ಮೂಲಕ ಭಾಗದ ಎಲ್ಲ ವಿದ್ಯಾರ್ಥಿಗಳ, ರೈತರ ಮತ್ತು ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಂಡಿದ್ದಾರೆ .

33 kv Station ಮುರಗುಂಡಿಯಿಂದ F5 ನಾಯಕವಾದಿ ಫೀಡರ ಸರಕೀಟ್ ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಅಧಿಕಾರಗಳ ಗಮನಕ್ಕೆ ತಂದಿದ್ದಾರೆ .

1) ಕಳೆದ 4-5 ದಿನಗಳಿಂದ ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವ ಸಂಧರ್ಭದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಅನಾನುಕೂಲವಾಗುತ್ತಿದೆ. ಈ ಅನಾನುಕೂಲಕ್ಕೆ ಕಾರಣವಾಗಿರುವ ಪ್ರತಿಯೊಬ್ಬ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ .
2 ) ರೈತರಿಗೆ ಹಗಲಿನಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕೆಂದು ಮಾನ್ಯ ಇಂಧನ ಸಚಿವರು ಹೇಳಿರುತ್ತಾರೆ ಆದರೆ ಮಾನ್ಯ ಇಂಧನ ಸಚಿವರು ಹೇಳಿರುವಂತೆ ರೈತರಿಗೆ ವಿದ್ಯುತ್ ಪೂರೈಕೆ ಆಗುತ್ತಿಲ್ಲ.ಈ ಅಧಿಕಾರಿಗಳನ್ನು ಈ ವಿಷಯದ್ ಬಗ್ಗೆ ಕೇಳಿದರೆ 33 kv Station, ಮುರಗುಂಡಿಯ, ಕ್ಯಾಪಾಸಿಟಿ ತುಂಬಾ ಕಡಿಮೆ ಇದೆ ಎಂದು ಕಳೆದ 5-6 ವರ್ಷಗಳಿಂದ ಬೇಜವಾಬ್ದಾರಿಯಿಂದ ಉತ್ತರ ಕೊಡುತ್ತಾರೆ.
3 ) ಇತ್ತೀಚಿಗೆ ವಿದ್ಯುತ್ ತಂತಿ ಮತ್ತು ಕಂಬಗಳು ಅಳವಡಿಸಿದ ಕಾಮಗಾರಿ ಅತ್ಯಂತ ಕಳಪೆಮಟ್ಟದ್ದಾಗಿದೆ.ಇದರ ಗುಣಮಟ್ಟವನ್ನು ಪರೀಕ್ಷಿಸಲು ನಿಯೋಗ ರಚಿಸಿ ಅದರ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
4 ) 45 ವರ್ಷಗಳ ಹಿಂದೆ ಅಳವಡಿಸಿದ ತಂತಿ ಮತ್ತು ಕಂಬಗಳು ಜನಸಾಮಾನ್ಯರು ಓಡಾಡುವ ಮತ್ತು ವಸತಿ ಇರುವ ಪ್ರದೇಶಗಳಲ್ಲಿ ಮೇಲಿಂದ ಮೇಲೆ ಹರಿದು ಬೀಳುತ್ತಿರುವುದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಅಪಾರವಾದ ಹಾನಿಯಾಗುತ್ತಿದೆ.ಕೆಲವು ಕಡೆ ಜೀವಹಾನಿಯು ಕೂಡ ಆಗಿದೆ ಇದರಿಂದ ರೈತರ ಜೀವನ ಅಲ್ಲೋಲ ಕಲ್ಲೋಲವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚರಗೊಂಡು ಈ ಸಮಸ್ಯೆಯನ್ನು ಬಹುಬೇಗ ಬಗೆಹರಿಸಬೇಕು.ಇದರ ಕುರಿತಾಗಿ ಯಾವುದೇ ರೈತರು ಅಧಿಕಾರಿಗಳನ್ನು ಕೇಳಿದರೆ Company ನಷ್ಟದಲ್ಲಿದೆ ಎಂದು ಹೇಳುತ್ತಾರೆ.
ಈ ಮೇಲೆ ಪಟ್ಟಿಮಾಡಿದ ಸಮಸ್ಯೆಗಳಲ್ಲಿ ಮೊದಲನೆಯ ಸಮಸ್ಯೆಯಿಂದ ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಅಧ್ಯಯನಕ್ಕೆ ಧಕ್ಕೆ ಉಂಟಾಗುತ್ತಿದೆ ಇದರಿಂದಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಲ್ಲಿ ತಮ್ಮ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕು.ಈ ಒಂದು ವೇಳೆ ಅಧಿಕಾರಿಗಳು ನಮ್ಮ ಮನವಿಯನ್ನು ನಿರ್ಲಕ್ಷವಹಿಸಿದರೆ ಮುಂಬರುವ ದಿನಗಳಲ್ಲಿ ಬೆಳಗಾವಿಯ ಸುವರ್ಣಸೌಧದ ಎದುರುಗಡೆ ನಮ್ಮ ಭಾಗದ ವಿದ್ಯಾರ್ಥಿಗಳ ಮತ್ತು ರೈತರ ಹಿತಕ್ಕಾಗಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದ್ದಾರೆ .
ಯಾವ ರೈತರಿಗೆ ನಾವು ದೇಶದ ಬೆನ್ನೆಲುಬು ಎಂದು ಭಾಷಣಗಳಲ್ಲಿ ಕರೆಯುತ್ತೇವೆಯೋ ಅಂಥ ರೈತರಿಗೆ ವಿದ್ಯುತ್ ವಿಷಯದಲ್ಲಿ ತಾರತಮ್ಯವಾಗುತ್ತಿದೆ ಈ ವಿಷಯವನ್ನು ಗಂಬಿರವಾಗಿ ಪರಿಗಣನೆಗೆ ತೆಗೆದುಕೊಂಡು ಈ ಮನವಿಯಲ್ಲಿ ಉಲ್ಲೇಖಿಸಿದ ರೈತರಿಗೆ ಸಂಬಂಧಪಟ್ಟ ಪ್ರಮುಖವಾದ ಸಾಮಾನ್ಯ ಬೇಡಿಕೆಗಳನ್ನು ಈಡೇರಿಸಲು ತಾವು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ .