
ಉತ್ತರ ಕರ್ನಾಟಕ ಅಂದ್ರೆ ಹುಬ್ಬಳ್ಳಿ-ಧಾರವಾಡಕ್ಕೆ ಅಷ್ಟೇ ಸೀಮಿತನಾ ಸರಕಾರಕ್ಕೆ ಶ್ರೀಗಳ ಪ್ರಶ್ನೆ
- Krishna Shinde
- 6 Jan 2024 , 11:52 PM
- Belagavi
- 149
ಬೆಳಗಾವಿ :ಕಿತ್ತೂರು ಕರ್ನಾಟಕದ ಅಭಿವೃದ್ಧಿಯ ಕುರಿತಾಗಿ ಬೆಳಗಾವಿ ಜಿಲ್ಲೆಯ ಎಲ್ಲ ಮಠಾಧೀಶರ ನೇತೃತ್ವದಲ್ಲಿ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ವಚನ ಅಧ್ಯಯನ ಕೇಂದ್ರದಲ್ಲಿ ಮಾತನಾಡಿದ ಶ್ರೀಗಳು ಗಡಿಭಾಗದಲ್ಲಿ ವಿಶೇಷವಾಗಿ ಪ್ರಾಥಮಿಕ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿದರು .

ಸರಕಾರವು ಗಡಿಭಾಗಗಳಲ್ಲಿ ಹೆಚ್ಚಿನ ಕನ್ನಡ ಶಾಲೆಗಳನ್ನು ಸ್ಥಾಪಿಸಲು ಒತ್ತಾಯಿಸಿದರು.

ಪೂರ್ಣಾವದಿ ಅಧಿವೇಶನ ಬೆಳಗಾವಿಯಲ್ಲಿ ನಡೆದಾಗ ಮಾತ್ರ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗುವುದು ಎಂದು ಹೇಳಿದ ಶ್ರೀಗಳು ಗಡಿಭಾಗದಲ್ಲಿ ಕನ್ನಡಕ್ಕೆ ವಿಶೇಷ ಪ್ರಾಶಷ್ಥ ನೀಡುವಂತ ಕೆಲಸ ಸರಕಾರದಿಂದ ಆಗಬೇಕು ಮತ್ತು ವಿಶೇಷ ಸೌಲಭ್ಯಗಳನ್ನು ನೀಡಲು ಒತ್ತಾಯಿಸಿದರು.
ಉತ್ತರ ಕರ್ನಾಟಕ ಅಂದ್ರೆ ಹುಬ್ಬಳ್ಳಿ-ಧಾರವಾಡ ಅಷ್ಟೇ , ಅಲ್ಲಿಗಿಂತ ಬೆಳಗಾವಿಗೆ ಹೆಚ್ಚಿನ ಕಚೇರಿಗಳು ಬರಬೇಕು ಮತ್ತು ಈ ಭಾಗದ ಅಭಿವೃದ್ಧಿ ಆಗಬೇಕು ಎಂದು ಶ್ರೀ ಗಳು ಹೇಳಿದ್ದಾರೆ.