
ಬೆಳಗಾವಿ : ರಾಜ್ಯ ವಿಧಾನಸಭಾ ಚುನಾವಣೆ ಸಮೀಸುತ್ತಿದ್ದಂತೆ ಖಾನಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅಡ್ಡು ಗಾಲು ಹಾಕಲು ಶತ ಪ್ರಯತ್ನ ನಡೆಸಿದ್ದಾರೆ.
ಇತ್ತೀಚಿಗೆ ಖಾನಾಪುರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕಿ ಅಂಜಲಿ ನಿಂಬಾಳಕರ ಅವರು ಅರಿಶಿಣ, ಕುಂಕುಮ ಕಾರ್ಯಕ್ರಮದಲ್ಲಿ ಮುತೈದೆಯರಿಗೆ ತಮ್ಮ ಅಂಜಲಿ ತಾಯಿ ಫೌಂಡೇಶನ್ ನಿಂದ ಊಟದ ಬಾಕ್ಸ್ ನೀಡಿರುವುದನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿರುವ ಬಿಜೆಪಿ. ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಪ್ರಮುಖ ಸ್ಥಾನದಲ್ಲಿರುವ ಡಾ. ಸೋನಾಲಿ ಸರನೊಬತ ಮಾಡುತ್ತಿರುವುದಾದರೂ ಏನು ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನೆ ಮಾಡ ತೊಡಗಿದ್ದಾರೆ.
ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ ಹಾಗೂ ಹಾಲಿ ಬಿಜೆಪಿ ಸರಕಾರದಲ್ಲಿ ಸಾಕಷ್ಟು ಅನುದಾನ ತಂದು ಖಾನಾಪುರ ಕ್ಷೇತ್ರವನ್ನು ಮಾದರಿ ಕ್ಷೇತ್ತವನ್ನಾಗಿಸಿ ಈ ಭಾಗದ ಜನರ ಆಶಾ ಕಿರಣವಾಗಿದ್ದಾರೆ. ಅಭಿವೃದ್ಧಿಯ ಹೊಳೆ ಹರಿಸುತ್ತಿರುವ ನಿಂಬಾಳಕರ ಅವರ ಏಳಿಗೆ ಸಹಿಸದ ಕೆಲ ನಾಮಾಂಕಿತರು ಅಂಜಲಿ ತಾಯಿ ಫೌಂಡೇಶನ್ ಕೆಲಸಕ್ಕೆ ಅಡ್ಡಿ ಪಡಿಸುತ್ತಿರುವುದು ಶಾಸಕಿ ನಿಂಬಾಳಕರ ಅವರ ಅಭಿಮಾನಿಗಳು ಸಿಡಿದ್ದೇದಿದ್ದಾರೆ.
ಬೆಳಗಾವಿ ಗ್ರಾಮೀಣ ಜಿಲ್ಲೆಯ ಮಹತ್ವದ ಹುದ್ದೆಯಲ್ಲಿರುವ ಡಾ. ಸೋನಾಲಿ ಸರನೊಬತಗೆ ಕೇವಲ ಖಾನಾಪುರ ಮತಕ್ಷೇತ್ರದಲ್ಲಿ ವ್ಯಾಮೋಹ ಏಕೆ ? ಪಕ್ಷ ಸಂಘಟನೆ ಮಾಡಬೇಕಾಗಿರುವುದು. ಇವರು ಬೆಳಗಾವಿ ಜಿಲ್ಲೆಯಲ್ಲಿ. ಆದ್ರೆ ಖಾನಪುರದಲ್ಲಿ ಇವರು ಮುಂಬರುವ ಅಭ್ಯರ್ಥಿಯಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಖಾನಾಪುರ ಜನರಿಗೆ ತಮ್ಮ ಫೌಂಡೇಶನ್ ನಿಂದ ಮಾಡಲಾಗುತ್ತಿರುವ ಪುಣ್ಯದ ಕೆಲಸ ರಾಜಕೀಯ ಗಿಮ್ಮಿಕೋ ಅಥವಾ ಸಮಾಜ ಸೇವೆಯೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ಸ್ವತಃ ಬಿಜೆಪಿ ಪಕ್ಷದ ಖಾನಾಪುರ ಮುಖಂಡ, ಮಾಜಿ ಶಾಸಕ ಅರವಿಂದ ಪಾಟೀಲ ಎಮಇಎಸ ಬಿಟ್ಟು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಬಿಜೆಪಿ ಪಕ್ಷಕ್ಕೆ ಬಂದಿದ್ದಾರೆ. ಇವರು ಸೋನಾಲಿ ಸರನೊಬತ ಯಾರು ಎಂದು ಪ್ರಶ್ನೆ ಮಾಡಿದ್ದ ಆಡಿಯೋ ಖಾನಾಪುರ ಮಾತ್ರವಲ್ಲ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಓಡಾಡಿದೆ.
ಕಾಂಗ್ರೆಸ್ ಪಕ್ಷದ ಶಾಸಕಿ ಅಂಜಲಿ ನಿಂಬಾಳಕರ ಖಾನಾಪುರ ಮತಕ್ಷೇತ್ರದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ಸರಕಾರದ ಕಣ್ಣು ತೆರೆಸಿದ್ದರು. ನಿಂಬಾಳಕರ ಅವರ ಕೆಲಸವನ್ನು ಸಹಿಸದ ಇಂಥವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.