ಮಹಿಳಾ ಸಂಘಗಳು ಮಹಿಳೆಯರ ಸ್ವಾವಲಂಬನೆಯ ಪ್ರತೀಕ

ಬನಹಟ್ಟಿ- ಮಹಿಳೆಯರು ಮಹಿಳಾ ಸಂಘಗಳನ್ನು ಕಟ್ಟುವ ಮೂಲಕ ಇತರರಿಗೆ ಮಾದರಿಯಾಗಲೀ ಎಂದು ರಬಕವಿ- ಬನಹಟ್ಟಿ ಠಾಣೆಯ ಪಿಎಸ್ಐ ಶಾಂತಾ ಹಳ್ಳಿ ಹೇಳಿದರು. 

promotions

ಅವರು ಪಟ್ಟಣದ ಶಂಕರಲಿಂಗ ದೇವಸ್ಥಾನದಲ್ಲಿ ಶಂಕರಲಿಂಗ ಮಹಿಳಾ ಸಂಘದ ಮೊದಲ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಪ್ರಸ್ತುತ ಕಾಲದಲ್ಲಿ ಮಹಿಳಾ ಸಂಘಟನೆಗಳು ಬಹಳ ಪ್ರಾಮುಖ್ಯತೆ ಪಡೆದುಕೊಂಡಿವೆ ಎಂದರು. 

promotions

 ಮಹಿಳೆಯರು ಕೇವಲ ಸಂಘಗಳ ಕಟ್ಟಿ ಅದರಿಂದ ಇತರ ಮಹಿಳೆಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ ಇತರ ಸಂಘಟನೆಗಳಿಗೆ ಮಾದರಿಯಾಗಬೇಕು ಎಂದರು.

ಸಂಘಟನೆಗಳ ಮೂಲಕ ಇತರರಿಗೆ ಸ್ವ- ಉದ್ಯೋಗ ಕಲ್ಪಿಸಿ ಅವರಿಗೆ ಸ್ವಾವಲಂಭಿ ಜೀವನ ನಡೆಸಲು ಅನೂಕೂಲವಾಗುವ ನಿಟ್ಟಿನಲ್ಲಿ ಸಾಗಬೇಕು. ಶಂಕರಲಿಂಗ ಮಹಿಳಾ ಸಂಘ ಕಳೆದ ಒಂದು ವರ್ಷದಿಂದ ವಿವಿದ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.  

ರೇವತಿ ಭೂತಿ ಸ್ವಾಗತಿಸಿ, ನಿರೂಪಿಸಿದರು. 

ಜ್ಯೋತಿ ಗುಣಕಿ, ಮಧು ಕೊಳಕಿ, ಅನುರಾಧಾ ಹೊರಟ್ಟಿ, ರತ್ನಾ ಕೊಳಕಿ ಹಾಗೂ ಸಂಘದ ಇತರೆ ಸದಸ್ಯರು ಇದ್ದರು.

ವರದಿ : ರವಿಕಿರಣ್   ಯಾತಗೇರಿ 

Read More Articles