42ನೇ ವಯಸ್ಸಿನಲ್ಲಿ ಎರಡನೇ ಮದುವೆಗೆ ಸಜ್ಜಾದ ಗಾಯಕಿ ಸುನೀತಾ

ಜನಪ್ರಿಯ ತೆಲುಗು ಗಾಯಕಿ ಸುನೀತಾ ಉಪದ್ರಷ್ಟ ಅವರು ನಿಶ್ಚಿತಾರ್ಥವಾಗಿದ್ದು, ಈ ಸುದ್ದಿಯನ್ನು ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ದೃಢಪಡಿಸಿದ್ದಾರೆ. ತಮ್ಮ ಮಧುರ ಕಂಠದ ಮೂಲಕ ಕನ್ನಡ, ತೆಲಗು, ತಮಿಳು ಜನರ ಮನಗೆದ್ದಿರುವ ಗಾಯಕಿ ಸುನೀತಾ ಉಪದ್ರಷ್ಟ ಅವರಿಗೆ ಈಗ 42ರ ಪ್ರಾಯ.

promotions
logintomyvoice

ಕೆಲವೇ ವರ್ಷಗಳ ಹಿಂದೆ ಮೊದಲ ಗಂಡನಿಗೆ ವಿಚ್ಛೇದನ ನೀಡಿದ್ದ ಅವರು ಈಗ ಎರಡನೇ ಮದುವೆ ಆಗುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ಮದುವೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

promotions

ಅವರು ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಈ ಹಿಂದೆಯೇ ಹಬ್ಬಿದ್ದರೂ, ಅದನ್ನು ಅವರು ನಿರಾಕರಿಸಿದ್ದರು. ಎಲ್ಲ ತಾಯಂದಿರ ರೀತಿಯಲ್ಲಿ ನನ್ನ ಮಕ್ಕಳು ಜೀವನದಲ್ಲಿ ಸೆಟ್ಲ್‌ ಆಗಲಿ ಎಂದು ನಾನು ಬಯಸುತ್ತೇನೆ.

logintomyvoice

ಅದೇ ವೇಳೆಗೆ ನಾನು ಕೂಡ ಜೀವನದಲ್ಲಿ ಸೆಟ್ಲ್‌ ಆಗಿರಬೇಕು ಎಂದು ಬಯಸುವ ಮಕ್ಕಳು ಮತ್ತು ಪಾಲಕರನ್ನು ಪಡೆದಿರುವುದಕ್ಕೆ ನಾನು ಧನ್ಯಳಾಗಿದ್ದೇನೆ. ಆ ಕ್ಷಣ ಕೊನೆಗೂ ಬಂದಿದೆ. ಅದ್ಭುತ ಸಂಗಾತಿಯಾಗಿ, ಕಾಳಜಿ ತೋರುವ ಸ್ನೇಹಿತನಾಗಿ ನನ್ನ ಜೀವನದಲ್ಲಿ ರಾಮ್‌ ಪ್ರವೇಶಿಸಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಟೋ ಸಮೇತ ಪೋಸ್ಟ್‌ ಮಾಡಿಕೊಂಡಿದ್ದಾರೆ ಸುನೀತಾ

Read More Articles