ಕೃಷಿ ವಿರೋಧಿ ನೀತಿ ಖಂಡಿಸಿ ಸುವರ್ಣಸೌಧ ಎದುರಿಗೆ ಮುಂದುವರೆದ ರೈತರ ಪ್ರತಿಭಟನೆ

ಬೆಳಗಾವಿ : ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಇಂದು ನಗರದ ಸುವರ್ಣಸೌಧ ಮುಂಬಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು. ರೈತ ಮುಖಂಡರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಇಂದು ಮತ್ತೆ ನಗರದಲ್ಲಿ ರೈತರು ಹೋರಾಟ ಮುಂದುವರೆಸಿದ್ದಾರೆ. ನಗರದ ಸುವರ್ಣಸೌಧ ಮುಂಬಾಗದಲ್ಲಿ ರೈತರು ನೆರೆದಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು. ಈಗಾಗಲೇ ಸುವರ್ಣಸೌಧ ಮುಂಬಾಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ರೈತರನ್ನು ಪೊಲೀಸರು ತಡೆಹಿಡಿದಿದ್ದು, ಸುವರ್ಣ ವಿಧಾನಸೌಧ ಸುತ್ತಲೂ ಬೀಗಿ ಪೊಲೀಸ್ ಬಂದೋಬಸ್ತ ಕೂಡಾ ಏರ್ಪಡಿಸಲಾಗಿದೆ.

promotions

promotions

Read More Articles