ಕೊನೆಗೂ SSLC, PUC ತರಗತಿ ಆರಂಭಕ್ಕೆ ಮೂಹರ್ತ ಪಿಕ್ಸ್
- 2 Jan 2024 , 3:45 AM
- Bengaluru
- 104
ಬೆಂಗಳೂರು: ರಾಜ್ಯದಲ್ಲೇ ತೀವ್ರ ಕುತೂಹಲ ಮೂಡಿಸಿದ್ದ ಶಾಲಾ ಕಾಲೇಜುಗಳ ಆರಂಭಕ್ಕೆ ಇನ್ನೇನು ತೆರೆ ಬಿದ್ದಿದ್ದು, ರಾಜ್ಯದಲ್ಲಿನ ಶಾಲಾ - ಕಾಲೇಜುಗಳ ಪುನರಾರಂಭದ ಬಗ್ಗೆ ಮುಹೂರ್ತ ಫಿಕ್ಸ್ ಮಾಡಲಿದ್ದಾರೆ. ಜನವರಿ 1 ರಿಂದ 10 ನೇ ತರಗತಿ ಹಾಗೂ 12 ನೇ ತರಗತಿ ಆರಂಭಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿರುವುದಾಗಿ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದರು.


ಈ ಕುರಿತಂತೆ ಟ್ವಿಟ್ ಮಾಡಿರುವಂತ ಸಿಎಂ ಯಡಿಯೂರಪ್ಪ 2021 ರ ಜನವರಿ 1 ರಿಂದ , 10 ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ 6 ರಿಂದ 9 ನೇ ತರಗತಿಗೆ ವಿದ್ಯಾಗಮ ಪ್ರಾರಂಭ ಮಾಡಲಾಗುತ್ತಿದೆ.

ಪ್ರಾಥಮಿಕ ಶಿಕ್ಷಣ ಸಚಿವರು, ಕೋವಿಡ್19 ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಇಂದು ವಿಸ್ತೃತವಾಗಿ ಚರ್ಚಿಸಿ, 2021ರ ಜನವರಿ 1 ರಿಂದ, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಹಾಗೂ 6 ರಿಂದ 9ನೇ ತರಗತಿಗೆ ವಿದ್ಯಾಗಮ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. 15 ದಿನ ಪರಿಸ್ಥಿತಿ ಅವಲೋಕಿಸಿ ಇತರ ತರಗತಿ ಪ್ರಾರಂಭಿಸುವ ಕುರಿತು ನಿರ್ಧರಿಸಲಾಗುವುದು.
ಹದಿನೈದು ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ಪ್ರಾರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದಾಗಿ ಇಂದು ನಡೆದಂತ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.










