ಪ್ರೀತಿ ವಿಷಯಕ್ಕೆ ಪಾಗಲ್ ಪ್ರೇಮಿಯ ಪೈಶಾಚಿಕ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ..!
- 15 Jan 2024 , 3:45 AM
- Dharwad
- 111
ಹುಬ್ಬಳ್ಳಿ: ಪ್ರೀತಿ ವಿಷಯಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ತಲ್ವಾರ ಹಾಕಿದ ಘಟನೆಯೊಂದು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದ್ದು, ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೌದು..ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಯುವಕ ಪ್ರೇಯಸಿಯ ಕೊಲೆಗೆ ಯತ್ನಿಸಿದ್ದು,ಮಾಸ್ಕ್ ಹಾಕಿಕೊಂಡು ಬಂದು ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ.ಯುವತಿಗೆ ತಲ್ವಾರ ಹಾಕಿದ ಹುಚ್ಚು ಫಾಗಲ್ ಪ್ರೇಮಿಯ ಕೃತ್ಯಕ್ಕೆ ಯುವತಿ ಗಂಭೀರ ಗಾಯಗೊಂಡಿದ್ದಾಳೆ. ಯುವತಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಈಗ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.











