ಕೊರೆಯುವ ಚಳಿಗೆ ಮೂಡಣ ದಿಕ್ಕಿನತ್ತ ನೋಡುತ್ತಿರುವ ಮತದಾರರು
- 15 Jan 2024 , 2:15 AM
- Belagavi
- 115
ಹುಕ್ಕೇರಿ: ತಾಲೂಕಿನಾದ್ಯಂತ ಇಂದು ಕೊರೋನಾ ಆತಂಕದ ನಡುವೆಯೂ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಗ್ರಾಮ ಪಂಚಾಯತಿ ಚುನಾವಣೆಗೆ ಮತಗಟ್ಟೆಗಳು ಸಜ್ಜಾಗಿದ್ದು ಕೊರೆಯುವ ಚಳಿಯಲ್ಲಿ ಗ್ರಾಮದ ಜನರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ಈಗಾಗಲೇ ಮಂದಗತಿಯಲ್ಲಿ ಮತದಾನ ಪ್ರಕ್ರಿಯೆ ಸಾಗುತ್ತಿದೆ.

ಇನ್ನೊಂದೆಡೆ ಕೆಲವರು ಚಳಿಗೆ ಹೆದರಿ ಮಗತಟ್ಟೆಗಳ ಕಡೆಗೆ ಮುಖ ಮಾಡದೆ ಬಿಸಿಲಿನ ಕಾವು ಪಡೆಯಲು ಮೂಡಣ ದಿಕ್ಕಿನತ್ತ ಜನರು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮೀಣ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಿದ್ದರಾಗಿದಂತು ನಿಜಾ, ಮುಂದೆ ಕಾದು ನೋಡಬೇಕು ಗ್ರಾಮಾಯಾಣದ ಕಥೆ...











