ಮತದಾರರಿಂದ ಮೆಚ್ಚುಗೆ ಗಿಟ್ಟಿಸಿಕೊಂಡ ಕರೋಶಿ ಪಿಡಿಒ

ಚಿಕ್ಕೋಡಿ: ತಾಲ್ಲೂಕಿನ ಕರೋಶಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ಪ್ರವೀಣ ಎಸ್‌.ಜಿ. ಮತದಾನ ಮಾಡಲು ಆಗಮಿಸುವ ಜನರಿಗೆ ಹತ್ತು ಸಾವಿರ ಮಾಸ್ಕ್, ಎರಡೂ ಸಾವಿರ ಲೀಟರ್ ಸ್ಯಾನಿಟೈಸರ್, ಚುನಾವಣೆಯ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಿರುವುದು ಎಲ್ಲರ ಮೆಚ್ವುಗೆಗೆ ಪಾತ್ರವಾಗಿದೆ.

promotions

ಈಗಾಗಲೇ ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಪಂ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಚಿಕ್ಕೋಡಿ ತಾಲೂಕನ ಕಮಕನಟ್ಟಿ ಗ್ರಾಮದಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, ಬೆಣ್ಣಿ ಹಳ್ಳಿ, ಬಂಬಲವಾಡ ಗ್ರಾಮದಲ್ಲಿ ಮತಗಟ್ಟೆಯ ‌ಹೊರಗಡೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಗ್ರಾಮದಲ್ಲಿ ಜನ ಗುಂಪುಗೂಡಲು ಪ್ರಯತ್ನಿಸಿದ್ದರಿಂದ ಜನರನ್ನು ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ್ದಾರೆ.

promotions

ಕೆಲವೊಂದು ಗ್ರಾಮ ಪಂಚಾಯತಿಯ ಮತಗಟ್ಟೆ ಕೇಂದ್ರಗಳಿಗೆ ಕುಟುಂಬ ಸದಸ್ಯರೆಲ್ಲರೂ ಬಂದು ಮತದಾನ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಯುವ ಮತದಾರರು ಮುಂಜಾನೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಮುಗಿಸಿ, ವಯೋವೃದ್ಧರನ್ನು ಕರೆದುಕೊಂಡು ಬರುವ ಕಾಯಕದಲ್ಲಿ ಮಗ್ನರಾಗಿದ್ದರು.

ಪ್ರತಿಯೊಂದು ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರು ಮತದಾನಕ್ಕೆ ಆಗಮಿಸುವ ಮತದಾರರಿಗೆ ಥರ್ಮಲ್ ಸ್ಕಾನ್ ಮಾಡುವುದರ ಜೊತೆಯಲ್ಲಿ ಕೈಗಳಿಗೆ ಸ್ಯಾನಿಸ್ಟೈಜರ್ ಸಿಂಪಡಣೆ ಮಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಿದ್ದರು.

Read More Articles