ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆಯ್ದ 28.195 ಜನರಿಗೆ ಲಸಿಕೆ

ಬೆಳಗಾವಿ: ಕೋವಿಡ್-19 ಲಸಿಕೆ ನೀಡಲು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ವ್ಯಾಕ್ಸಿನ್ ಸಂಗ್ರಹಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ಸಂಗ್ರಹಿಸಲು ಪ್ರತ್ಯೇಕ ಕೊಠಡಿ (ವಾಕ್ ಇನ್ ಕೂಲರ್, ವಾಕ್ ಇನ್ ಫ್ರೀಜರ್) ಸಿದ್ಧಗೊಳಿಸಲಾಗಿದ್ದು ಈ ಸ್ಟೋರೇಜ್ ಘಟಕಕ್ಕೆ ಪುಣೆ, ಹೈದ್ರಾಬಾದ್, ಚೆನ್ನೈನಿಂದ ಲಸಿಕೆಗಳು ಬರಲಿವೆ.

promotions

ಇಲ್ಲಿಂದ ಬೆಳಗಾವಿ ಸೇರಿ ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಾರವಾರ ಹಾಗೂ ಕೊಪ್ಪಳ ಜಿಲ್ಲೆಗೆ ಲಸಿಕೆ ಹಂಚಿಕೆಯಾಗಲಿವೆ. ಲಸಿಕೆ ಹಂಚಿಕೆಗೆ ಎಲ್ಲ ರೀತಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಲಸಿಕೆ ಬಂದ ತಕ್ಷಣ ನೀಡಲು ಬೆಳಗಾವಿ ಜಿಲ್ಲೆಯಲ್ಲಿ 180 ಡೀಪ್ ಫ್ರೀಜರ್ಸ್ ಮತ್ತು ಐಸ್‌ಲೈನ್ ರೆಫ್ರಿಜೆರೇಟರ್ (ಐಎಲ್‌ಆರ್) ಉಪಕರಣಗಳನ್ನು ಅಣಿಗೊಳಿಸಲಾಗಿದೆ.

promotions

ಇವುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದೆ. ಇವುಗಳಿಗೆ ಆರೋಗ್ಯಾಧಿಕಾರಿ ಕಚೇರಿಯಲ್ಲಿನ ಮಖ್ಯ ಲಸಿಕೆ ಸಂಗ್ರಹ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಯ ಔಷಧ ಸಂಗ್ರಹಣ ಘಟಕದಿಂದ ಲಸಿಕೆ ಸರಬರಾಜಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಹಂತ 28.195 ಜನರಿಗೆ ಲಸಿಕೆ: ಮೊದಲ ಹಂತದಲ್ಲಿಜಿಲ್ಲೆಯ 195 ಸರ್ಕಾರಿ ಆಸ್ಪತ್ರೆಗಳು, 1,521 ಖಾಸಗಿ ಆಸ್ಪತ್ರೆಗಳ ವೈದ್ಯರು, ನರ್ಸ್‌ಗಳು ಸೇರಿ ಆರೋಗ್ಯ ಇಲಾಖೆಯ 28,195 ಸಿಬ್ಬಂದಿಗೆ ಲಸಿಕೆ ನೀಡಲು ಅಧಿಕಾರಿಗಳು ಅಣಿಯಾಗುತ್ತಿದ್ದಾರೆ.

ಎರಡನೇ ಹಂತದಲ್ಲಿಪೊಲೀಸ್ ಸಿಬ್ಬಂದಿ, ಆತಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು ಸೇರಿ ಎರಡುವರೆ ಲಕ್ಷ ಜನರಿಗೆ ಲಸಿಕೆ ನೀಡಲಿದ್ದಾರೆ. ಮೂರನೇ ಹಂತದಲ್ಲಿ ಸಮುದಾಯ ನೀಡಲು ಯೋಜಿಸಿದಾರೆ. 50 ವರ್ಷ ಮೇಲಟವರಿಗೆ ಆದತೆ ನೀಡಿ ಲಸಿಕೆ ನೀಡಲು ತೀರ್ಮಾನಿಸಿದಾರೆ.

ಮೂರು ಹಂತಗಳ ಲಸಿಕೆ ನೀಡುವುದಕ್ಕೆ ಹಂಶ ಹಂತವಾಗಿ ಲಸಿಕೆಗಳು ಬರಲಿವೆ. ಮೊದಲ ಹಂತದ ಲಸಿಕೆಗಳು ಜನವರಿ 15ರ ವೇಳೆಗೆ ಬರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 53 ಲಕ್ಷ ಜನರಿಗೆ ಲಸಿಕೆ ನೀಡುವುದಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಮುಖ್ಯ ಲಸಿಕೆ ಸಂಗ್ರಹ ಕೇಂದ್ರ ಹೊರತುಪಡಿಸಿ ಜಿಲ್ಲೆಯಲ್ಲಿ 180 ಕೋಲ್ಡ್ ಚೈನ್ ಪಾಯಿಂಟ್‌ಗಳ ಮೂಲಕ ಲಸಿಕೆ ನೀಡುವ ಕಾರ್ಯ ನಡೆಯಲಿದೆ.

Read More Articles