ದೈಹಿಕ ವಿಕಲಚೇತನರ ದ್ವಿಚಕ್ರ ವಾಹನಕ್ಕೆ ಅರ್ಜಿ ಆಹ್ವಾನ

ಬೆಳಗಾವಿ : ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಇವರ ಅಧ್ಯಕ್ಷತೆಯಲ್ಲಿ ಜರುಗಿದ 2019-20ನೇ ಸಾಲಿನ ಇಲಾಖೆಯ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ ವಿಕಲಚೇತನ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯ ತೀರ್ಮಾನಿಸಿದೆ.

promotions

ಜಿಲ್ಲೆಯ ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಕಾಗವಾಡ ಮತ್ತು ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರಗಳಲ್ಲಿ ನಿಗದಿಪಡಿಸಿದ ಗುರಿಗಿಂತ ಕಡಿಮೆ ಅರ್ಹ ಫಲಾನುಭವಿಗಳು ಆಯ್ಕೆಯಾಗಿರುತ್ತಾರೆ. ಕಾರಣ ಸದರಿ ನಾಲ್ಕು ಮತಕ್ಷೇತ್ರಗಳ ದೈಹಿಕ ವಿಕಲಚೇತನರಿಂದ ಮಾತ್ರ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಶೇಕಡಾ 75 ಅಥವಾ ಹೆಚ್ಚಿನ ಅಂಗವಿಕಲತೆ ಪ್ರಮಾಣ ಹೊಂದಿರುವ ಕನಿಷ್ಠ 20 ವರ್ಷ ಗರಿಷ್ಠ 60 ವರ್ಷ ವಯೋಮಿತಿಗೊಳಪಟ್ಟ ವಿಕಲಚೇತನ ವ್ಯಕ್ತಿಗಳು ತಮ್ಮ ತಾಲೂಕಿನ ತಾಲೂಕು ಪಂಚಾಯತಿ ಕಛೇರಿಯಲ್ಲಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ)ರಿಗೆ ಈ ಕೆಳಕಾಣಿಸಿದ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಲಾದ ದಿನಾಂಕ ಜ.28 ರ ಒಳಗಾಗಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.

promotions
ಲಗತ್ತಿಸಬೇಕಾದದಾಖಲಾತಿಗಳು
  1. ವೈದ್ಯಕೀಯ ಪ್ರಮಾಣ ಪತ್ರ / ಯು.ಡಿ.ಐ.ಡಿ./ ಗುರುತಿನ ಚೀಟಿ ಅಥವಾ ಅಂಗವಿಕಲರ ಪ್ರತಿ.
  2. ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ. (ಹಿಂದಿನ 10 ವರ್ಷ ವಾಸವಿರುವ ಬಗ್ಗೆ)
  3. ವಾಹನ ಚಾಲನಾ ಪ್ರಮಾಣ ಪತ್ರ,ಆದಾಯ ಮತ್ತು ಜಾತಿ ಪ್ರಮಾಣ ಪತ್ರ,
  4. ವಯಸ್ಸಿನ ದಾಖಲಾತಿ, ಸ್ವಂತ ಉದ್ಯೋಗ/ ಖಾಸಗಿ ನೌಕರಿ / ಶಿಕ್ಷಣದ ಬಗ್ಗೆ ದೃಢೀಕರಣ ಪತ್ರ ಲಗತ್ತಿಸುವುದು.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.)ರನ್ನು ದೂರವಾಣಿ ಸಂಖ್ಯೆ: ( 0831-2476096) ಗೆ ಸಂಪರ್ಕಿಸಿ ಎಂದು ಜಿಲ್ಲಾ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲಿ ತಿಳಿಸಿದ್ದಾರೆ.

Read More Articles