ಡೊನಾಲ್ಡ್‌ ಟ್ರಂಪ್‌ ಟ್ವಿಟರ್ ಖಾತೆ ಸ್ಥಗಿತ

  • 9 Jan 2021 , 10:43 AM
  • world
  • 110

ವಾಷಿಂಗ್ಟನ್: ಯು.ಎಸ್.ಕ್ಯಾಪಿಟಲ್’ನಲ್ಲಿ ನಡೆದ ದಾಂದಲೆಗೆ ಮತ್ತಷ್ಟು ಪ್ರಚೋದನೆ ನೀಡುವ ರೀತಿಯಲ್ಲಿ ಟ್ರಂಪ್‌ ಟ್ವೀಟ್ ಗಳಿದ್ದ ಕಾರಣ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟರ್‌ ತಿಳಿಸಿದೆ.

promotions

ಡೊನಾಲ್ಡ್‌ ಟ್ರಂಪ್ ಅವರ ಖಾತೆಯಿಂದ ಇತ್ತೀಚೆಗೆ ಮಾಡಲಾದ ಟ್ವೀಟ್‌ಗಳನ್ನು ಮತ್ತು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಗಲಭೆಗೆ ಮತ್ತಷ್ಟು ಪ್ರಚೋಧನೆ ನೀಡುವ ಅಪಾಯವಿದೆ ಎಂದು ಪರಿಗಣಿಸಿ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವೀಟ್‌ ಮೂಲಕ ತಿಳಿಸಲಾಗಿದೆ.

Read More Articles