ಕುಂದಾನಗರಿಗೆ ಬಂದಿಳಿದ ಬಹು ನಿರೀಕ್ಷಿತ ಕೋವಿಡ್ ಲಸಿಕೆ

ಬೆಳಗಾವಿ: ಕೊನೆಗೂ ಮಕರ ಸಂಕ್ರಾಂತಿಯ ಪ್ರಾರಂಭಿಕ ದಿನದಂದು ಬಹು ನಿರೀಕ್ಷಿತ ಕೋವಿಡ್ ಲಸಿಕೆ ಕುಂದಾನಗರಿ ಬೆಳಗಾವಿಗೆ ಬಂದಿಳಿದಿದೆ. ಪುಣೆಯಿಂದ ಇಂದು ಬುಧವಾರ ಬೆಳ್ಳಂಬೆಳಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ರಸ್ತೆ ಮಾರ್ಗವಾಗಿ ಬೆಳಗಾವಿ ತಲುಪಿದೆ. ಪುಣೆಯಿಂದ ಬಂದ ಕೊರೊನಾ ಲಸಿಕೆಗೆ ಡಿ.ಎಚ್.ಓ ಕಚೇರಿ ಬಳಿ ವಾಹನಕ್ಕೆ ಆರತಿ ಬೆಳಗಿ, ತೆಂಗಿನಕಾಯಿ ಕಾಯಿ ಒಡೆದು ಸಿಬ್ಬಂದಿ ವರ್ಗ ಪೂಜೆ ಸಲ್ಲಿಸಿ ಬರ ಮಾಕೊಂಡಿದ್ದಾರೆ.

promotions

ಸದ್ಯ ವಾಕ್ ಇನ್ ಕೂಲರ್ ನಲ್ಲಿ ಲಸಿಕೆ ಸಂಗ್ರಹ ಮಾಡಲಾಗಿದ್ದು. ಇಲ್ಲಿಂದ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೆ ಇಲ್ಲಿಂದ ಸರಬರಾಜು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ವೈದ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

Read More Articles