ಪರಸ್ಪರ ಸಹಾಯ ಸಹಕಾರ ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕು; ಮಾರುತಿ ಅಷ್ಟಗಿ

ಹುಕ್ಕೇರಿ: ಆಶೆ ಆಮಿಷಗಳನ್ನು ಒಡ್ಡಿ ನಮ್ಮ ನಮ್ಮಲ್ಲಿ ಒಡೆದು ಆಳುವ ನೀತಿ ಅನುಸರಿಸುವ ಪಟ್ಟಬದ್ದ ಹಿತಾಸಕ್ತಿಗಳಿಗೆ ಅವಕಾಶ ನೀಡಬಾರದೆಂದು ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಹೇಳಿದರು. ಅವರು ಗುರುವಾರ ದಿ. 14 ರಂದು ಮಾವನೂರ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸತ್ಕರಿಸಿ ಮಾತನಾಡಿದರು.

promotions

ತಾವೆಲ್ಲರೂ ಪರಸ್ಪರ ಸಹಾಯ ಸಹಕಾರ ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕು ಸ್ಥಳೀಯ ಶಾಸಕರು ಗ್ರಾ.ಪಂಗಳಿಗೆ ಎಷ್ಟರ ಮಟ್ಟಿಗೆ ಅನುದಾನ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿಗೆದೆ. ಕೇಂದ್ರ ಸರ್ಕಾರದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಲ್ಲಿ ಗ್ರಾಮದ ಅಭಿವೃದ್ದಿ ಕಾರ್ಯಗಳನ್ನು ಮಾಡಿಕೊಡಬೇಕೆಂದು ಹೇಳಿದರು.

promotions

ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿರ್ದೇಶಕ ಅಶೋಕ ಚಂದಪ್ಪಗೋಳ, ಮಾಜಿ ತಾ.ಪಂ. ಸದಸ್ಯ ಪ್ರಕಾಶ ಪೈರಾಸಿ, ಕೆಂಪಣ್ಣಾ ಚಿತ್ತೂರ, ತಾ.ಪಂ. ಸದಸ್ಯ ಸಿದ್ದಪ್ಪ ಶಿರಗಾಂವಿ, ದುಂಡಪ್ಪ ದೇವರಮನಿ, ಗುರುಸಿದ್ದ ಲಟ್ಟೆ, ಬಸಗೌಂಡ ಮುಸ್ಮಾರಿ, ಶಂಕರ ಸಾವಿನಾಯ್ಕ, ಕಾಡಪ್ಪ ಮುಸ್ಮಾನಿ, ರವೀಂದ್ರ ಚಂದಪ್ಪಗೋಳ, ಗುರುನಾಥ ಚಂದಪ್ಪಗೋಳ, ಚಂದ್ರಕಾಂತ ಹೆಬ್ಬಾಳ ಹಾಗೂ ಮಾವನೂರ ಗ್ರಾ.ಪಂ. ನೂತನ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ತಿತರಿದ್ದರು.

Read More Articles