ನನ್ನನ್ನು ಸಚಿವ ಸ್ಥಾನದಿಂದ ಕೈಬಿಡುವುದಿಲ್ಲ, ಅದೇಲ್ಲವೂ ಸುಳ್ಳು ಸುದ್ದಿ, ಸಚಿವ ಪಾಟೀಲ್

ಬೆಳಗಾವಿ: ನನ್ನನ್ನು ಸಚಿವ ಸ್ಥಾನದಿಂದ ಕೈಬಿಡುವುದಿಲ್ಲ, ಅದೇಲ್ಲವೂ ಸುಳ್ಳು ಸುದ್ದಿಯಿದೆ ಮುಖ್ಯಮಂತ್ರಿಗಳು ನನಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಯಾವುದೇ ಸೂಚನೆ ಕೊಡುವುದಿಲ್ಲ ಎಂದು ಬೆಳಗಾವಿಯಲಿ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ. ಒಂದು ವೇಳೆ ರಾಜೀನಾಮೆ ನೀಡಿ ಎಂದು ಹೇಳಿದರೆ ತಾವು ನೀಡುತ್ತೀರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಖ್ಯಮಂತ್ರಿ, ಪಕ್ಷದ ಹೈಕಮಾಂಡ ಏನೇ ಹೇಳಿದ್ರು ನಾವು ಪಾಲಿಸಬೇಕು. ನಾನು ಏನನ್ನು ಕೇಳದೇ ಅವರು ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ.

promotions

ಒಂದು ವೇಳೆ ಹಾಗೇನಾದರೂ ಮುಖ್ಯಮಂತ್ರಿಗಳು ರಾಜೀನಾಮೆ ಕೊಡು ಅಂದ್ರೆ ಕೊಡಲೇಬೇಕಾಗುತ್ತದೆ. ಯಡಿಯೂರಪ್ಪನವರು ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ ಉಳಿದವರಿಗೆ ಮಂತ್ರಿ ನೀಡದಕ್ಕೆ ಏನಾದರೂ ಸಮಸ್ಯೆ ಇರಬಹುದು‌ ಅದಕ್ಕೆ ನೀಡಿಲ್ಲ ಎಂದು ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

promotions

Read More Articles