ದಾಖಲೆ ಬರೆದ ಭಾರತ ವಿಶ್ವದ ಅತೀ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್
- 9 Jan 2024 , 4:56 AM
- Delhi
- 110
ಭಾರತ :ವಿಶ್ವವನ್ನೆ ತಲ್ಲಣ ಮೂಡಿಸಿದ್ದ ಕೊರೋನಾ ವೈರಸ್ ಸೋಂಕಿನ ವಿರುದ್ದ ಸಾಮೂಹಿಕ ಹೋರಾಟದಲ್ಲಿ ವಿಶ್ವದಲ್ಲಿ ಭಾರತ ವೈರಸ್‌ಗೆ ಮದ್ದು ಕಂಡು ಹಿಡಿಯುವುದರ ಮೂಲಕ ಮಹತ್ವದ ದಾಖಲೆ ಮಾಡಿದೆ. ಜ.22 ರ ಬೆಳಿಗ್ಗೆ 7 ಗಂಟೆಯವರೆಗೆ, ಸುಮಾರು 10.5 ಲಕ್ಷ (10,43,534) ಫಲಾನುಭವಿಗಳು ದೇಶಾದ್ಯಂತದ ಕೋವಿಡ್ -19 ವ್ಯಾಕ್ಸಿನೇಷನ್ ಲಸಿಕೆ ಪಡೆದುಕೊಂಡಿರುವುದು ದಾಖಲೆಯಾಗಿದೆ.

ಕಳೆದ 24 ಗಂಟೆಗಳಲ್ಲಿ, 4,049 ಸೆಷನ್‌ಗಳಲ್ಲಿ 2,37,050 ಜನರಿಗೆ ಲಸಿಕೆ ನೀಡಲಾಯಿತು. ಈವರೆಗೆ 18,167 ವ್ಯಾಕ್ಸಿನೇಷನ್ ಸೆಶನ್ ನಡೆಸಲಾಗಿದೆ. ಭಾರತದಲ್ಲಿ ಅತೀ ಹೆಚ್ಚು ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 8,00,242 ಮಾದರಿಗಳನ್ನು ಪರೀಕ್ಷಿಸಲಾಯಿತು.


ಅಲ್ಲದೆ, ಕಳೆದ 24 ಗಂಟೆಗಳಲ್ಲಿ 18,002 ಹೊಸ ವಸೂಲಿಗಳನ್ನು ನೋಂದಾಯಿಸಲಾಗಿದೆ. ಕೋವಿಡ್-19 ವಿರುದ್ದ ಹೋರಾಟದಲ್ಲಿ ಸಮರ್ಥವಾಗಿ ಎದುರಿಸಿದ್ದ ಭಾರತಕ್ಕೆ ವ್ಯಾಕ್ಸಿನಲ್ಲಿಯೂ ದಾಖಲೆ ಮಾಡುತ್ತಿರುವುದಕ್ಕೆ ಇಡೀ ವಿಶ್ವವೇ ಹೆಮ್ಮೆ ಪಡುವಂತಾಗಿದೆ.










