ಕೇಂದ್ರ ಬಜೆಟ್: ಎಲೆಕ್ಟ್ರಾನಿಕ್ ವಸ್ತು ಅಗ್ಗ: ಕೊರೋನಾ ಲಸಿಕೆಗೆ 35 ಕೋಟಿ ಮೀಸಲು
- 18 Dec 2023 , 1:37 AM
- Delhi
- 96
ಹೊಸದಿಲ್ಲಿ :ದೇಶದಲ್ಲಿ ಕೊರೋನಾ ವೇಳೆಯಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಕೇಂದ್ರ ನಿರ್ಧರಿಸಿದೆ. ಕೊರೋನಾ ಲಸಿಕೆಗೆ 35 ಕೋಟಿ ರೂ ಬಜೆಟ್ ಮೀಸಲಿಡಲಾಗಿದ್ದು, ಅಗತ್ಯದ ವೇಳೆಯಲ್ಲಿ ಕೇಂದ್ರ ಹೆಚ್ಚು ಹಣ ಬಿಡುಗಡೆ ಮಾಡಲಿದೆ.

ದೇಶದಲ್ಲಿ 115 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರ ನಿರ್ಮಾಣ ಮಾಡಲಾಗುತ್ತದೆ. ಗ್ರಾಮೀಣ ಆರೋಗ್ಯ ಕೇಂದ್ರಗಳ ನಿರ್ಮಾಣ, 4 ವೈರಾಲಿಜಿ ಇನ್ಸ್ಟಿಟ್ಯೂಟ್ಗಳ ಸ್ಥಾಪನೆ, 5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ, 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಆರೋಗ್ಯ ಕ್ಷೇತ್ರದ ಮೂಲ ಸೌಲಭ್ಯಕ್ಕೆ 64,180 ಕೋಟಿ ರೂ. ಘೋಷಿಸಲಾಗಿದೆ. ಮಧ್ಯಮ ವರ್ಗದ ಜನರ ಭಾರೀ ನಿರೀಕ್ಷೆಯ ನಡುವೆಯೂ ವರಮಾನ ತೆರಿಗೆ ಸ್ತರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿರ್ಧರಿಸಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವೆ ಕೋವಿಡ್ ನಂತರದಲ್ಲಿ ಆರ್ಥಿಕತೆಗೆ ಚುರುಕು ನೀಡಲು ಹೆಚ್ಚಿನ ಆದ್ಯತೆ ನೀಡುವ ಪಣ ಪ್ರದರ್ಶಿಸಿದರು. ಇದೇ ವೇಳೆ 75 ವರ್ಷ ಮೀರಿದ ಹಿರಿಯ ಚೇತನಗಳಿಗೆ ಆದಾಯ ತೆರಿಗೆ ವಿವರ ಸಲ್ಲಿಕೆ ಅರ್ಜಿ ತುಂಬುವ ಶ್ರಮದಿಂದ ವಿನಾಯಿತಿ ನೀಡಲಾಗಿದೆ. ಕೋವಿಡ್ ನಂತರದ ಮೊದಲ ಬಜೆಟ್‌ನಲ್ಲಿ ಸಹಜವಾಗಿಯೇ ಮಹಾಮಾರಿ ನಿಯಂತ್ರಣಕ್ಕೆ ಒತ್ತು ನೀಲಾಗಿದ್ದು, ಲಸಿಕೆಗಳಿಗಾಗಿ 35 ಸಾವರಿ ಕೋಟಿ ಮೀಸಲಿಡುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೈ ಬಜೆಟ್ ಪ್ರಮುಖಾಂಶ ಬೆಂಗಳೂರು ನಮ್ಮ ಮೆಟ್ರೊದ 2ಎ, 2 ಬಿ ಯೋಜನೆಯಡಿ 58.19 ಕಿಮೀ ಮಾರ್ಗ ವಿಸ್ತರಣೆಗಾಗಿ ರೂ. 14,788 ಕೋಟಿ ಅನುದಾನ ರೈತರ ಸಾಲಕ್ಕೆಂದೇ 16.5 ಲಕ್ಷ ಕೋಟಿ ರೂಪಾಯಿಯನ್ನ ಮೀಸಲು ಧಾನ್ಯಗಳ ಖರೀದಿಗೆ 10,500 ಕೋಟಿ ರೂಪಾಯಿ ಮೀಸಲು ಅಸಂಘಟಿತ ಕಾರ್ಮಿಕ ವಲಯಕ್ಕೂ ಪಿಂಚಣಿ ವ್ಯವಸ್ಥೆ ಜಾರಿ ಪ್ರಧಾಣ ಮಂತ್ರಿ ಆತ್ಮನಿರ್ಭರ ಆರೋಗ್ಯ ಯೋಜನೆ ಘೊಷಣೆ 20 ವರ್ಷಗಳ ನಂತರ ವಾಹನಗಳ ತಪಾಸಣೆ, ಗುಜರಿ ನೀತಿ ಕೇರಳ, ಬಂಗಾಳ ರಸ್ತೆಗಳ ನಿರ್ಮಣಕ್ಕೆ ಭರಪೂರ ಹಣ 7 ಕಡೆ ಹೊಸದಾಗಿ ಜವಳಿ ಪಾರ್ಕ್ ನಿರ್ಮಾಣ ಉತ್ಪಾದನಾ ವಲಯಕ್ಕೆ1.94 ಕೋಟಿ ರೂಪಾಯಿ ಅನುದಾನ










