ಗಡಿನಾಡಿಗೆ ಬಿಟ್ಟು ಬಿಡದೆ ಕಾಡುತ್ತಿದೆ ಕಿಲ್ಲರ್ ಕೋರೊನಾ

ಬೆಳಗಾವಿ: ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜಿನಿಂದ ಇಂದು ಕೂಡ ಮತ್ತೆ ಒಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ವಾಪಸ್ಸಾದ  P-6270 (32) ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ನಗರದ ಬೀಮ್ಸ್ ಆಸ್ಪತ್ರೆ ಐಷೋಲೇಶನ್ ವಾರ್ಡ‌ನಲ್ಲಿ ಸೋಂಕಿತಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 303 ಕ್ಕೇರಿದ ಪಾಸಿಟಿವ್ ಕೇಸ್ ಗಳು, ಇದರಲ್ಲಿ 217 ಜನರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಜಿಲ್ಲೆಯಲ್ಲಿ 86 ಆಕ್ಟಿವ್ ಕೇಸಗಳಿವೆ. ಗಡಿ ಜಿಲ್ಲೆಗೆ ಇನ್ನೂ ಹೊರರಾಜ್ಯದ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ನಿಯಮಿತವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಿದರೆ ಕೋರೊನಾದಿಂದ ಪಾರಾಗಬಹುದು.

promotions

Read More Articles