ಕಾಕತಿ ಗ್ರಾಪಂ ಅಧ್ಯಕ್ಷರಾಗಿ‌ ಸುನಿಲ್ ಆಯ್ಕೆ

ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಕಾಕತಿ‌ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಸುನೀಲ ಬಾಬುರಾವ್ ಸುಣಗಾರ ಹಾಗೂ ಉಪಾಧ್ಯಕ್ಷರಾಗಿ ವರ್ಷಾ ಲಕ್ಷ್ಣಣ ಮುಂಚಡಿಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

promotions

ಶಾಸಕ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದು ಸುಣಗಾರ, ಸರಜೂ ಶಾಪುರಕರ, ಕೃಷ್ಣಾ ಕುರಬರ, ಸಾಗರ ಪಿಂಗತ, ಪ್ರದೀಪ ಎಂ.ಜಿ., ಪರಶು ನಾರವೇಕರ, ಸುರೇಶ ನಾಯ್ಕ ಇನ್ನಿತರರು ಇದ್ದರು.

promotions

Read More Articles