ಕ್ಯಾಂಪಸ್ ಸಂದರ್ಶನದಲ್ಲಿ 119 ವಿದ್ಯಾರ್ಥಿಗಳು ಆಯ್ಕೆ
- shivaraj bandigi
- 15 Jan 2024 , 3:20 AM
- Belagavi
- 473
ಬೈಲಹೊಂಗಲ : ಪಟ್ಟಣದ ಕೆ. ಎಲ್. ಇ. ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ) ಮಹಾವಿದ್ಯಾಲಯದಲ್ಲಿ

ಫೂಕೊಕು ಇಂಡಿಯಾ ಪ್ರಾ. ಲಿಮಿಟೆಡ್ (ಜಪಾನ, ಎಮ್.ಎನ್.ಸಿ. ಕಂಪನಿ)-ಬೆಳಗಾವಿ ವತಿಯಿಂದ ಡಿಪ್ಲೋಮಾ ಮತ್ತು ಪದವಿ ಪಾಸಾದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗಿತ್ತು.

ಫೂಕೊಕು ಇಂಡಿಯಾ ಪ್ರಾ. ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಸಿದ್ದಪ್ಪ ರೆಂಟೆ, ಮೇಘಾ ಪಾಟೀಲ
ಮಾತನಾಡಿ, ಫೂಕೊಕು ಇಂಡಿಯಾ ಪ್ರಾ. ಲಿಮಿಟೆಡ್ ಕಂಪನಿಯ ಪ್ರಾರಂಭ ಮತ್ತು ಅದರ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿ, ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾಂವಿ
ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ವ್ಯಕ್ತಿತ್ವ ವಿಕಸನ ಅಳವಡಿಕೆ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿ, ಉದ್ಯೋಗದಲ್ಲಿ ಕಾರ್ಯನಿರತ ಪ್ರಾವಿಣ್ಯತೆಯನ್ನು ಪಡೆದ ನಂತರ ಬರುವ ದಿನಗಳಲ್ಲಿ ಸ್ವ-ಉದ್ಯೋಗ ಪ್ರಾರಂಭಿಸಲು ಕಾರ್ಯಪ್ರವರ್ತರಾಗಬೇಕೆಂದರು.
ಸಂಪಗಾವಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ ಉಳ್ಳೆಗಡ್ಡಿ ಮಾತನಾಡಿ, ಬೆಳಗಾವಿ ಜಿಲ್ಲೆಯೂ ವ್ಯವಸಾಯ ಪ್ರಧಾನವಾದ ಜಿಲ್ಲೆಯಾಗಿದೆ. ಇಲ್ಲಿನ ಯುವಕರು ವಿದ್ಯಾಭ್ಯಾಸ ಮುಗಿಸಿದ ಮೇಲೆ ಹೆಚ್ಚಾಗಿ ತಾವಿದ್ದಲ್ಲಿಯೇ ದುಡಿಮೇಯ ಮಾರ್ಗ ಕಂಡುಕೊಂಡು
ಬೆಳೆದ ಉರಿನಲ್ಲೇ ಇರಲು ಬಯಸುತ್ತಾರೆ, ಆದರೆ ಇದಕ್ಕೆ ಪರ್ಯಾಯವಾಗಿ ಎಲ್ಲಿಲ್ಲಿ ಉದ್ಯೋಗಾವಕಾಶಗಳಿವೆಯೋ ಅಲ್ಲಿಗೆ ಹೋಗಿ ಆದಾಯ ಗಳಿಸುವ ಜೊತೆಗೆ ತಿಳಿವಳಿಕೆ ಹೆಚ್ಚಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಬಿ. ಎಸ್. ತಟವಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಶ್ರೀಧರ ನಿರಡಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಫೂಕೊಕು ಇಂಡಿಯಾ ಪ್ರಾ. ಲಿಮಿಟೆಡ್ ಕಂಪನಿ ಉದ್ಯೋಗ ಒದಗಿಸುತ್ತಿರುವದು ಸಂತಸದ ವಿಷಯ. ಸಂಸ್ಥೆಯ ಎಲ್ಲ ಅಧಿಕಾರಿಗಳಿಗೂ ಧನ್ಯವಾದಗಳು ಎಂದರಲ್ಲದೆ ಸಂದರ್ಶನದಲ್ಲಿ ವಿವಿಧ ಸ್ಥಳಗಳಿಂದ ಸುಮಾರು 357 ವಿದ್ಯಾರ್ಥಿಗಳು ಭಾಗವಹಿಸಿದ್ದರು ಅದರಲ್ಲಿ 119 ವಿದ್ಯಾರ್ಥಿಗಳು ಆಯ್ಕೆಯಾಗಿರುವದು ಹೆಮ್ಮೆಯ ಸಂಗತಿ ಎಂದರು.
ಸತೀಶ ಪಾಟೀಲ,ಎಚ್. ಆಯ್. ಸಂಕಣ್ಣವರ ಕಾರ್ಯಕ್ರಮ ನೆರವೇರಿಸಿದರು. ವ ಐ.ಟಿ.ಐ, ಡಿಪ್ಲೊಮಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.
ವರದಿ : ರವಿಕಿರಣ್ ಯಾತಗೇರಿ










