ಉತ್ತರಾಖಂಡ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಿದ ಪ್ರಧಾನಿ

  • 15 Jan 2024 , 4:50 AM
  • Delhi
  • 102

ಉತ್ತರಾಖಂಡದ ಚಮೋಲಿಯಲ್ಲಿ ಹಿಮನದಿ ಹಿಮಪಾತದಿಂದಾಗಿ ಉಂಟಾದ ದುರಂತದಲ್ಲಿ ಪ್ರಾಣ ಕಳೆದು ಕೊಂಡವರ ಕುಟುಂಬದವರಿಗೆ  ಪಿಎಂಎನ್‌ಆರ್‌ಎಫ್‌ನಿಂದ ಎಕ್ಷ ಗ್ರೇಶಿಯ ತಲಾ 2 ಲಕ್ಷ ರೂ ಹಾಗು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ ನೀಡಲಾಗುವುದು ಎಂದು ಘೋಷಿಸಲಾಗಿದೆ.

promotions

ಹಾಗು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರೊಂದಿಗೆ ಮಾತನಾಡಿ ಉತ್ತರಾಖಂಡದ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಉತ್ತರಾಖಂಡದಲ್ಲಿ ನಡೆದ ಘಟನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ.

promotions

ಭಾರತವು ಉತ್ತರಾಖಂಡದೊಂದಿಗೆ ನಿಂತಿದೆ ಮತ್ತು ರಾಷ್ಟ್ರವು ಅಲ್ಲಿ ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತದೆ ಎಂದು ಪ್ರಧಾನಿ ಟ್ವಿಟ್ ಮಾಡಿದ್ದಾರೆ. ತಪೋವನ್ ಎನ್‌ಟಿಪಿಸಿ ಯೋಜನೆಯ ಸೈಟ್‌ನಲ್ಲಿ ಕೆಲಸ ಮಾಡುತ್ತಿದ್ದ 176 ಕಾರ್ಮಿಕರು ಈಗಿನಂತೆ ಕಾಣೆಯಾಗಿದ್ದಾರೆ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ. ಈವರೆಗೆ 7 ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.

2 ಪೊಲೀಸರು ಸಹ ಕಾಣೆಯಾಗಿದ್ದಾರೆ. ಐಟಿಬಿಪಿ, ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಜೊತೆಗೆ ಸ್ಥಳೀಯ ಆಡಳಿತ ಮತ್ತು ಪೊಲೀಸರು ಪಾರುಗಾಣಿಕಾ ಕಾರ್ಯಗಳನ್ನು ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

Read More Articles